Select Your Language

Notifications

webdunia
webdunia
webdunia
webdunia

ಆಲಿಯಾ ಜತೆ ಸಂಬಂಧ, ಸೋನಾಕ್ಷಿ ಜತೆ ಮದುವೆ ಎಂದ ಹೀರೋ

ಆಲಿಯಾ ಜತೆ ಸಂಬಂಧ, ಸೋನಾಕ್ಷಿ ಜತೆ ಮದುವೆ ಎಂದ ಹೀರೋ
Mumbai , ಮಂಗಳವಾರ, 3 ಜನವರಿ 2017 (13:32 IST)
ಕರಣ್ ಜೋಹರ್ ನಡೆಸಿಕೊಡುವ ಸೆಲೆಬ್ರಿಟಿ ಟಾಕ್ ಶೋ ’ಕಾಫಿ ವಿತ್ ಕರಣ್’ ಇತ್ತೀಚೆಗೆ ತುಂಬಾ ಹಾಟ್ ಆಗಿ ನಡೆಯಿತು. ಈ ಶೋನಲ್ಲಿ ಪಾಲ್ಗೊಂಡ ಶಾಹಿದ್ ಕಪೂರ್, ಮೀರಾ ರಾಜಪುತ್ ದಂಪತಿಗಳು ಬೋಲ್ಡ್ ಆಗಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
 
ಈ ಸಂದರ್ಭದಲ್ಲಿ ಕರಣ್ ಕೇಳಿದ ಫಟಾಫಟ್ ಪ್ರಶ್ನೆಗಳಿಗೆ ಈ ಜೋಡಿ ತುಂಬಾ ತಮಾಷೆಯಾಗಿ, ಓಪನ್ ಆಗಿ ಉತ್ತರ ಕೊಟ್ಟಿದೆ. ಶೋನ ಭಾಗವಾಗಿರುವ ಕಿಲ್ ಮ್ಯಾರಿ ಹುಕಪ್ ಆಟದಲ್ಲಿ ಸೋನಾಕ್ಷಿ ಸಿನ್ಹಾ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾರೊಂದಿಗೆ ಯಾರನ್ನು ಸಾಯಿಸ್ತೀರಾ, ಯಾರನ್ನು ಮದುವೆ ಮಾಡಿಕೊಳ್ಳುತ್ತಿ, ಯಾರೊಂದಿಗೆ ಸಂಬಂಧ ಇಟ್ಟುಕೊಳ್ಳುತ್ತಿ ಎಂಬ ಪಶ್ನೆಗೆ, ಅಲಿಯಾತೋ ರಿಲೇಷನ್‍ಶಿಪ್, ಸೊನಾಕ್ಷಿ ಜತೆ ಮದುವೆ, ಪ್ರಿಯಾಂಕಾರನ್ನು ಸಾಯಿಸುತ್ತೇನೆ ಎಂದು ಹೇಳಿದ್ದಾರೆ
 
ಆಲಿಯಾ ಜತೆಗೆ ಸಂಬಂಧ ಇಟ್ಟುಕೊಳ್ಳುವುದು ತುಂಬಾ ಕ್ಷೇಮ ಎಂದು ಆಕೆಯೊಂದಿಗೆ ಹುಕಪ್ ಆಗುತ್ತಿದ್ದೇನೆ ಎಂದಿದ್ದಾರೆ. ಇನ್ನು ದ್ರೋಹ, ಅತ್ತೆಮನೆ, ಬ್ಯಾಡ್ ಸೆಕ್ಸ್, ಬೋರ್‍‌ಡಂ ಇವುಗಳಲ್ಲಿ ವಿವಾಹ ಬಂಧನಕ್ಕೆ ಯಾವುದು ಮುಳುವಾಗುತ್ತದೆ ಎಂದು ಮೀರಾರನ್ನು ಕೇಳಿದ್ದಕ್ಕೆ, ನಮ್ಮ ಅತ್ತೆ ಮನೆಯವರು ತುಂಬಾ ಒಳ್ಳೆಯವರು, ಬೋರ್‌ಡಂಗೆ ಅವಕಾಶವೇ ಇಲ್ಲ, ಕೆಟ್ಟ ಶೃಂಗಾರದ ಸಹವಾಸಕ್ಕೆ ನಾವು ಹೋಗುವುದೇ ಇಲ್ಲ ಎಂದಿದ್ದಾರೆ ಮೀರಾ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫಸ್ಟ್ ರ್ಯಾಂಕ್ ರಾಜು ಈಗ ’ರಾಜು ಕನ್ನ ಮೀಡಿಯಂ’