Select Your Language

Notifications

webdunia
webdunia
webdunia
webdunia

ಫಸ್ಟ್ ರ್ಯಾಂಕ್ ರಾಜು ಈಗ ’ರಾಜು ಕನ್ನಡ ಮೀಡಿಯಂ’

ಫಸ್ಟ್ ರ್ಯಾಂಕ್ ರಾಜು ಈಗ ’ರಾಜು ಕನ್ನಡ ಮೀಡಿಯಂ’
Bangalore , ಮಂಗಳವಾರ, 3 ಜನವರಿ 2017 (12:59 IST)
ಸೂಪರ್ ಹಿಟ್ ಚಿತ್ರ ರಂಗಿತರಂಗ ತಂಡ ಸೇರಿಕೊಂಡು `ರಾಜು ರಂಗಿತರಂಗ’ ಎಂಬ ಚಿತ್ರವನ್ನು ಶುರು ಮಾಡಿತ್ತು. ಈ ಚಿತ್ರವೀಗ ಚಿತ್ರೀಕರಣದ ಹಂತದಲ್ಲಿದೆ. ಆದರೀಗ ಚಿತ್ರತಂಡ ಶೀರ್ಷಿಕೆಯನ್ನು ಬದಲಿಸಿಕೊಂಡಿದೆ. ಈ ಚಿತ್ರಕ್ಕೆ ಹೊಸದಾಗಿ `ರಾಜು ಕನ್ನಡ ಮೀಡಿಯಂ’ ಎಂದು ನಾಮಕರಣ ಮಾಡಲಾಗಿದೆ.
 
ನಿರ್ದೇಶಕ ನರೇಶ್ ಕುಮಾರ್ ಹಾಗೂ ನಿರ್ಮಾಪಕ ಕೆ ಎ ಸುರೇಶ್ ಅವರುಗಳು ಸೇರಿ ಚರ್ಚೆ ನಡೆಸಿಯೇ ಈ ಶೀರ್ಷಿಕೆ ಬದಲಾವಣೆ ಮಾಡಿದ್ದಾರಂತೆ. ಈ ಚಿತ್ರಕ್ಕೆ ಫಸ್ಟ್ ರ್ಯಾಂಕ್ ರಾಜು ಚಿತ್ರದ ನಾಯಕ ಗುರುನಂದನ್ ಅವರೇ ನಾಯಕ. ರಂಗಿತರಂಗದ ನಾಯಕಿಯರಲ್ಲೊಬ್ಬರಾಗಿದ್ದ ಆವಂತಿಕಾ ಶೆಟ್ಟಿ ನಾಯಕಿ. 
 
ಹೀಗಿರುವಾಗ ಈ ಚಿತ್ರಕ್ಕೆ ರಾಜು ರಂಗಿತರಂಗ ಎಂದು ಹೆಸರಿಡಲಾಗಿತ್ತು. ಆದರೆ ಚಿತ್ರೀಕರಣ ಸಾಗುತ್ತಿರುವಾಗ ಇದರ ಕಥೆಗೂ ಹೆಸರಿಗೂ ತಾಳೆಯಾಗೋದಿಲ್ಲ ಎಂಬ ಭಾವನೆ ಕಾಡಿತಂತೆ. ಹೀಗಾಗಿಯೇ ಶೀರ್ಷಿಕೆ ಬದಲಾವಣೆ ಮಾಡಿರೋದಾಗಿ ನಿರ್ದೇಶಕರು ಮತ್ತು ನಿರ್ಮಾಪಕರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಈ ಚಿತ್ರ ಇನ್ನೇನು ಚಿತ್ರೀಕರಣ ಮುಗಿಸಿಕೊಳ್ಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಾಗಿಣಿ ನಾಗಿಣಿ ಡ್ಯಾನ್ಸ್ ಫೋಟೋ ರಿಲೀಸ್