Select Your Language

Notifications

webdunia
webdunia
webdunia
webdunia

ಲಿಟ್ಲ್‌ಖಾನ್ ಜತೆ ಕಿಂಗ್ ಖಾನ್ ಗಲ್ಲಿ ರೈಡ್

ಲಿಟ್ಲ್‌ಖಾನ್ ಜತೆ ಕಿಂಗ್ ಖಾನ್ ಗಲ್ಲಿ ರೈಡ್
Mumbai , ಬುಧವಾರ, 22 ಫೆಬ್ರವರಿ 2017 (10:58 IST)
ಬಾಲಿವುಡ್ ಕಿಂಗ್ ಖಾನ್ ಶಾರುಖ್ ತನ್ನ ಲಿಟ್ಲ್ ಖಾನ್ ಅಬ್ರಮ್‌ರನ್ನು ಕ್ಷಣಕಾಲವೂ ಬಿಟ್ಟಿರಲ್ಲ. ಶೂಟಿಂಗ್, ಕ್ರಿಕೆಟ್ ಪಂದ್ಯಗಳಲ್ಲಿ ಎಲ್ಲಿ ನೋಡಿದರೂ ಅಪ್ಪಮಗನ ಆರ್ಭಟ ಹೇಳತೀರದು. ಶಾರುಖ್‍ಗಿಂತಲೂ ಅಬ್ರಮ್ ದೊಡ್ಡ ಸೆಲೆಬ್ರಿಟಿಯಾಗಿದ್ದಾನೆ ಎಂದು ಹೇಳಬಹುದು.
 
ಇತ್ತೀಚೆಗೆ ಮುಂಬೈ ಗಲ್ಲಿಗಳಲ್ಲಿ ಶಾರುಖ್ ತನ್ನ ಮಗ ಅಬ್ರಮ್ ಜತೆಗೆ ರೌಂಡ್ಸ್ ಹೊಡೆದಿದ್ದಾರೆ. ಕಾರನ್ನು ಶಾರುಖ್ ಡ್ರೈವ್ ಮಾಡುತ್ತಿದ್ದರೆ, ಪಕ್ಕದಲ್ಲಿರುವ ಸೆಕ್ಯುರಿಟಿ ಗಾರ್ಡ್  ಅಬ್ರಮ್‌ನನ್ನು ಕೂರಿಸಿಕೊಂಡಿದ್ದಾರೆ.
 
ಕಾರು ಓಪನ್ ಟಾಪ್ ಆಗಿರುವ ಕಾರಣ ಅಬ್ರಮ್ ಸಖತ್ ಎಂಜಾಯ್ ಮಾಡಿದ್ದಾನೆ. ಇವರಿಬ್ಬರನ್ನೂ ನೋಡಿದ ಅಭಿಮಾನಿಗಳು ಕೂಡಲೆ ತಮ್ಮ ಮೊಬೈಲ್‌ಗಳಲ್ಲಿ ಅಪ್ಪ ಮಗನ ಜೋಡಿಯನ್ನು ಸೆರೆಹಿಡಿದುಕೊಂಡು ಸಂಭ್ರಮಿಸಿದ್ದಾರೆ. ಕೆಲವರಂತೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಯಾಳಂ ನಟಿ ಪ್ರಕರಣಕ್ಕೆ ನಟ ದಿಲೀಪ್ ಹೆಸರು ಥಳುಕು ಹಾಕಿದ ಮಾಧ್ಯಮಗಳು!