ವಿಮಾನದಲ್ಲಿ ನಟಿಗೆ ಲೈಂಗಿಕ ಕಿರುಕುಳ

ಭಾನುವಾರ, 10 ಡಿಸೆಂಬರ್ 2017 (08:12 IST)
ಮುಂಬೈ: ಬಾಲಿವುಡ್ ನಟಿ ಜೈರಾ ವಾಸೀಮ್ ಗೆ ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನಂತೆ. ದೆಹಲಿ-ಮುಂಬೈ ವಿಮಾನದಲ್ಲಿ  ಈ ಘಟನೆ ನಡೆದಿದೆ.


ದಂಗಲ್ ಖ್ಯಾತಿ ಯ ನಟಿ ಜೈರಾ ಗೆ ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. 'ಸಹ ಪ್ರಯಾಣಿಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಸಹಾಯ ಕೇಳಿದ್ರೂ ಯಾರೂ ಸಹಾಯ ಮಾಡಿಲ್ಲ' ಎಂದು ಇನ್ ಸ್ಟಾ ಗ್ರಾಂನಲ್ಲಿ ಅಳುತ್ತಾ ನೋವು ತೋಡಿಕೊಂಡಿದ್ದಾರೆ ಜೈರಾ.


ಸಮಗ್ರ ತನಿಖೆ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ವಿಸ್ತಾರಾ ಏರ್ ಲೈನ್ಸ್ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಮೆರಿಕಾ ಅಮೆರಿಕಾ ಚಿತ್ರದ ನಟಿ ಹೇಮಾಗೆ ಮತ್ತೆ ಕಂಕಣಭಾಗ್ಯ