Select Your Language

Notifications

webdunia
webdunia
webdunia
webdunia

ಬಾಹುಬಲಿ ನಟಿ ಜೊತೆ ಅಸಭ್ಯ ವರ್ತನೆ ತೋರಿದವನಿಗೆ ಕಪಾಳಮೋಕ್ಷ...?!

ಬಾಹುಬಲಿ ನಟಿ ಜೊತೆ ಅಸಭ್ಯ ವರ್ತನೆ ತೋರಿದವನಿಗೆ ಕಪಾಳಮೋಕ್ಷ...?!
ಮುಂಬೈ , ಮಂಗಳವಾರ, 1 ಆಗಸ್ಟ್ 2017 (18:02 IST)
ಅನುಚಿತ ವರ್ತನೆ ತೋರಿದ ನಟನಿಗೆ ನಟಿ ಸ್ಕಾರ್ಲೆಟ್ ವಿಲ್ಸನ್ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಬಾಹುಬಲಿ ಚಿತ್ರದಲ್ಲಿ ಮನೋಹರಿ ಐಟಂ ಸಾಂಗ್`ನಲ್ಲಿ ಕಾಣಿಸಿಕೊಂಡಿದ್ದ ಸ್ಕಾರ್ಲೆಟ್ ವಿಲ್ಸನ್ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಅಶ್ಲೀಲ ವರ್ತನೆ ತೋರಿದವನಿಗೆ ಬಿಸಿ ಮುಟ್ಟಿಸಿದ್ದಾರೆ.

ನಟಿ ಸ್ಕಾರ್ಲೆಟ್  ಹನ್ಸಾ ಏಕ್ ಸನ್ಯೋಗ್ ಚಿತ್ರದ ೈಟಂ ಸಾಂಗ್`ನಲ್ಲಿ ನಟಿಸುತ್ತಿದ್ದು, ಸೆಟ್`ನಲ್ಲಿದ್ದ ುಮಾಕಾಂತ್ ಎಂಬಾತ ಅಶ್ಲೀಲ ಸನ್ನೆ ಮಾಡಿದ್ದನಂತೆ. ಜೊತೆಗೆ ಕೂದಲು ಮುಟ್ಟಲು ಪ್ರಯತ್ನಿಸಿದ್ದಾನೆ. ಈ ಸಂದರ್ಭ ತಾಳ್ಮೆ ಕಳೆದುಕೊಂಡ ನಟಿ ಕಪಾಳಕ್ಕೆ ಹೊಡೆದು ಶೂಟಿಂಗ್ ಸೆಟ್`ನಿಂದಲೇ ಹೊರಹೋಗಿದ್ದಾರೆ ಎಂದು ವರದಿಯಾಗಿದೆ.

ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿರುವ ಚಿತ್ರತಂಡದ ಸದಸ್ಯರು ಘಟನೆಯನ್ನ ಖಚಿತಪಡಿಸಿದ್ದಾರೆ. ನಿರ್ಮಾಪಕರು ಸಹ ಫಿಲ್ಮ್ ಫೆಡರೇಶನ್`ಗೆ ಈ ಬಗ್ಗೆ ದೂರು ನೀಡಲು ನಿರ್ಧರಿಸಿದ್ದು, ಒಂದೊಮ್ಮೆ ರಾಯ್ ಕ್ಷಮೆ ಕೇಳದಿದ್ದರೆ ನಟನಾ ಪರವಾನಗಿ ರದ್ದಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಕಾಜೋಲ್ ಗೆ ಪ್ರತಿದಿನ ಬೈತಾರಂತೆ ಪತಿ ಅಜಯ್ ದೇವಗನ್!