Publish Date: Tue, 01 Aug 2017 (10:37 IST)
Updated Date: Tue, 01 Aug 2017 (10:39 IST)
ಮುಂಬೈ: ಬಾಲಿವುಡ್ ನಟಿ ಕಾಜೋಲ್ ಮತ್ತು ಅಜಯ್ ದೇವಗನ್ 18 ವರ್ಷಗಳಿಂದ ಗಂಡ-ಹೆಂಡಿರಾಗಿ ಬದುಕುತ್ತಿದ್ದಾರೆ. ಇವರಿಬ್ಬರ ಜೋಡಿ ನೋಡಿ ಅದೆಷ್ಟೋ ಜನ ಹೊಟ್ಟೆ ಉರಿದುಕೊಂಡವರೂ ಇರ್ತಾರೆ. ಆದರೆ ಕಾಜೋಲ್ ಇದೀಗ ಪತಿಯ ಬಗ್ಗೆ ಹೊಸದೊಂದು ಕಂಪ್ಲೇಂಟ್ ಮಾಡಿದ್ದಾಳೆ.
ಅಷ್ಟಕ್ಕೂ ಇದು ಕಂಪ್ಲೇಂಟ್ ಅನ್ನುವುದಕ್ಕಿಂತ ಹೊಸ ವಿಷಯ ಎನ್ನಬಹುದೇನೋ. ಪ್ರತೀ ದಿನ ಒಂದಲ್ಲಾ ಒಂದು ವಿಷಯಕ್ಕೆ ಅಜಯ್ ನನಗೆ ಬೈತಾರೆ ಎಂದು ಕಾಜೋಲ್ ಹೇಳಿಕೊಂಡಿದ್ದಾರೆ.
ತಮಿಳು ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವ ಕಾಜೋಲ್ ಆ ಚಿತ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಇಂತಹದ್ದೊಂದು ವಿಷಯ ಬಿಚ್ಚಿಟ್ಟಿದ್ದಾರೆ. ‘ಅಜಯ್ ನಿಂದ ಪ್ರತೀ ದಿನ ನಾನು ಬೈಸಿಕೊಳ್ಳುತ್ತೇನೆ, ಅದಕ್ಕೆ ಕಾರಣ ನನ್ನ ಮಾತುಗಳು. ಎಲ್ಲಿ ಏನು ಎಂದು ನೋಡದೇ ತೋಚಿದ್ದನ್ನು ಹೇಳಿಬಿಡುವ ನನ್ನ ಬಾಯಿಬಡುಕಿ ಸ್ವಭಾವದಿಂದಾಗಿ ಅಜಯ್ ತೊಂದರೆಗೆ ಸಿಲುಕಿಕೊಳ್ಳುತ್ತಾನೆ. ಇದೇ ಕಾರಣಕ್ಕೆ ನಾನು ಅವನಿಂದ ಬೈಸಿಕೊಳ್ಳುತ್ತೇನೆ’ ಎಂದು ಕಾಜೋಲ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ