Select Your Language

Notifications

webdunia
webdunia
webdunia
webdunia

ಫ್ಯಾಮಿಲಿ ಜತೆ ಸ್ಕೂಟರ್‌ನಲ್ಲಿ ಸಂಜು ಬಾಬಾ ಜಾಲಿ ರೈಡ್!

ಫ್ಯಾಮಿಲಿ ಜತೆ ಸ್ಕೂಟರ್‌ನಲ್ಲಿ ಸಂಜು ಬಾಬಾ ಜಾಲಿ ರೈಡ್!
Mumbai , ಸೋಮವಾರ, 20 ಫೆಬ್ರವರಿ 2017 (12:01 IST)
ಇಷ್ಟು ದಿನ ಜೈಲು ಹಕ್ಕಿಯಾಗಿದ್ದ ಬಾಲಿವುಡ್ ನಟ ಸಂಜಯ್ ದತ್ ಈಗ ಫ್ರೀ ಬರ್ಡ್. ಹಾಗಾಗಿ ಈಗ ಕುಟುಂಬದ ಜತೆಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಚಿತ್ರೀಕರಣದಲ್ಲಿ ಬಿಜಿಯಾಗಿದ್ದರೂ ಕುಟುಂಬಕ್ಕಾಗಿ ಸ್ವಲ್ಪ ಸಮಯ ಮೀಸಲಿಟ್ಟು ಅಲ್ಲೇ ಎಲ್ಲರೊಂದಿಗೂ ಸುತ್ತಾಡಿ ಸಂಭ್ರಮಿಸಿದ್ದಾರೆ ಸಂಜು ಬಾಬಾ.
 
ಒಮಂಗ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ’ಭೂಮಿ’. ಈ ಚಿತ್ರದ ಶೂಟಿಂಗ್ ಸ್ಪಾಟ್‌ಗೆ ಕುಟುಂಬ ಸದಸ್ಯರ ಜತೆಗೆ ಬೆರೆತು ಆಗಮಿಸುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ತನ್ನ ಪತ್ನಿ ಮಾನ್ಯತಾ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ  ಜಾಲಿ ರೈಡ್ ಮಾಡುತ್ತಾ ಶೂಟಿಂಗ್ ಸ್ಥಳಕ್ಕೆ ಆಗಮಿಸಿದ್ದಾರೆ ಸಂಜು. 
 
ಈ ಸನ್ನಿವೇಶವನ್ನು ನೋಡಿ ಚಿತ್ರತಂಡ ಖುಷಿಯಾಯಿತು.  ಅವರ ಉತ್ಸಾಹಕ್ಕೆ ಥ್ರಿಲ್ ಆಗಿದೆ. ಒಟ್ಟಾರೆ ಸಂಜಯ್ ದತ್ ಹಳೆಯದನ್ನೆಲ್ಲಾ ಮರೆತು ಈಗ ಹೊಸ ಹುರುಪಿನಲ್ಲಿದ್ದಾರೆ. ಕುಟುಂಬ, ಮಕ್ಕಳು ಎಂದು ಸ್ವಲ್ಪ ಮುತುವರ್ಜಿ ತೋರುತ್ತಿರುವುದು ವಿಶೇಷ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರನ್ನು ಭೇಟಿ ಮಾಡಿದ ಬಿಗ್ ಬಾಸ್ ವಿನ್ನರ್