ನಟಿ ಸಮಂತಾ ರೂಟ್ ಪ್ರಭು ಮುಂಬರುವ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಅವರು ಯಾವುದೇ ಚಿತ್ರಕ್ಕೂ ಅವರು ಸಹಿ ಹಾಕಲು ಒಪ್ಪುತ್ತಿಲ್ಲ. ಇತ್ತೀಚೆಗೆ ತೆರೆ ಕಂಡ ತೇರಿ, 24 ಹಾಗೂ A...Aa. ಚಿತ್ರಗಳ ಕಥೆಗಿಂತ ತಮ್ಮ ಮುಂಬರುವ ಚಿತ್ರ ವಿಭಿನ್ನವಾಗಿ ಇರಲು ಸಮಂತಾ ಬಯಸುತ್ತಿದ್ದಾಳೆ. ದಕ್ಕಾಗಿ ಅವರು ಉತ್ತಮ ಚಿತ್ರಗಳ ನಿರೀಕ್ಷೆಯಲ್ಲಿದ್ದಾರೆ.
ತಮ್ಮ ಮುಂಬರುವ ಚಿತ್ರ ಹೆಚ್ಚು ಸ್ಪೆಷಲ್ ಆಗಿ ಇರಬೇಕು ಎಂಬುದು ಸಮಂತಾಳ ಆಸೆ. ಟ್ವಿಟರ್‌ನಲ್ಲಿ ಸಮಂತಾ ಅಭಿಮಾನಿಯೊಬ್ಬರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಮಂತಾ, ನೀವೂ ಹೊಸ ಚಿತ್ರಕ್ಕೆ ಸಹಿ ಹಾಕಿದ್ದೀರಾ? ಎಂದು ಕೇಳಲಾದ ಪ್ರಶ್ನೆಗೆ ಸಮಂತಾ ಉತ್ತರ ನೀಡಿದ್ದಾರೆ.
ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸಮಂತಾ... ನನ್ನ ಮುಂಬರುವ ಚಿತ್ರ ಹೆಚ್ಚು ಸ್ಪೆಷಲ್ ಆಗಿ ಇರಬೇಕು ಎಂದು ನಾನು ಬಯಸುತ್ತೇನೆ. ಅಲ್ಲದೇ ವಿಭಿನ್ನವಾಗಿರುವಂತಹ ಚಿತ್ರಕ್ಕೆ ನಾನು ಸಹಿ ಹಾಕಲಿದ್ದೇನೆ ಎಂದು ಸಮಂತಾ ತಿಳಿಸಿದ್ದಾರೆ.
ಈ ವರ್ಷದಂದು ಸಮಂತಾ ನಟಿಸಿರುವ ಒಟ್ಟು ನಾಲ್ಕು ಚಿತ್ರಗಳು ರಿಲೀಸ್ ಕಂಡಿವೆ. ತೇರಿ, 24 ಚಿತ್ರ, ಹಾಗೂ ಬ್ರಹ್ಮೋತ್ಸವಮ್, A...Aa, ಚಿತ್ರಗಳು ರಿಲೀಸ್ ಆಗಿವೆ. ಸಮಂತಾ ಮುಂಬರುವ ತೆಲಗು ಚಿತ್ರ ಜನತಾ ಗ್ಯಾರೇಜ್ ರಿಲೀಸ್ ಆಗಲಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ