ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಪುತ್ರಿ ಐಶ್ವರ್ಯ ವರ್ಜೀನಿಯಾದಲ್ಲಿರುವ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ವಾರಾಂತ್ಯದಲ್ಲಿ ಭೇಟಿ ನೀಡಿ ಅಲ್ಲಿ ಪುತ್ರಿಯ ಜತೆ ರಜನಿಕಾಂತ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಅಪ್ಪಾ ಹಾಗೂ ನಾನು ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದೇವೆ ಎಂದು ರಜನಿಕಾಂತ್ ಪುತ್ರಿ ಐಶ್ವರ್ಯ ಬರೆದುಕೊಂಡಿದ್ದಾರೆ. ಟ್ವಿಟರ್ ಪೇಜ್‌ನಲ್ಲಿ ಎರಡು ಫೊಟೋಗಳನ್ನು ಪೋಸ್ಟ್ ಮಾಡಿದ್ದಾರೆ.
65 ವರ್ಷದ ನಟ ರಜನಿಕಾಂತ್ ಕೆಲ ದಿನಗಳ ಹಿಂದೆಯಷ್ಟೇ ಅಮೇರಿಕಾದಲ್ಲಿದ್ದರು. ಕಳೆದ ತಿಂಗಳು ಅವರು ಅಲ್ಲಿಂದ ವಾಪಸ್ಸಾಗಿದ್ದರು.
ಕೆಲ ದಿನದ ಹಿಂದಷ್ಟೇ ಅಮೇರಿಕಾಕ್ಕೆ ಫ್ಯಾಮಿಲಿ ಜತೆಗೆ ರಜನಿಕಾಂತ್ ತೆರಳಿದ್ದರು. ಮುಂದಿನ ವಾರದಂದು ಅವರು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಕಬಾಲಿ ಚಿತ್ರದ ಫೈನಲ್ ಕಾಪಿಯನ್ನು ರಜನಿಕಾಂತ್ ವೀಕ್ಷಿಸಲಿದ್ದಾರಂತೆ.ಇನ್ನೂ ಇದೇ ವಾರದಂದು ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ರಜನಿ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ