ಸಲ್ಮಾನ್ ಖಾನ್ ಬಾಲಿವುಡ್ ನ ಸೂಪರ್ ಸ್ಟಾರ್. ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ತಾರೆ.ಆದ್ರೆ ಸಲ್ಲು ಭಾಯಿ ಸಿನಿಮಾದಲ್ಲಿ ಹೇಗೆ ಬೇಕಾದ್ರು ಅಭಿನಯಿಸಲಿ ಆದ್ರೆ ಮನೆಯಲ್ಲಿ ಮಾತ್ರ ಅವರೊಬ್ಬ ಸಾಮಾನ್ಯ ಸಹೋದರ, ಒಬ್ಬ ಮಗ, ಒಬ್ಬ ಮಾವ, ಒಬ್ಬ ಚಿಕ್ಕಪ್ಪ, ಹಾಗೆ ಅತ್ತಿಗೆಯೆಂದರ ಮುದ್ದಿನ ಮೈದುನ.
ಸಲ್ಮಾನ್ ಖಾನ್ ಅವರು ಸಿನಿಮಾವನ್ನು ಎಷ್ಟು ಪ್ರೀತಿಸುತ್ತಾರೋ ಅದಕ್ಕಿಂತ ಹೆಚ್ಚಾಗಿ ತನ್ನ ಕುಟುಂಬವನ್ನು ಪ್ರೀತಿಸುತ್ತಾರೆ. ತಾನು ಎಷ್ಟೇ ಬ್ಯುಸಿ ಇರ್ಲಿ . ಸಲ್ಮಾನ್ ಖಾನ್ ಅವರು ತಮ್ಮ ಕುಟುಂಬಕ್ಕೆ ಅಂತಾ ಕೊಂಚ ಸಮಯವನ್ನು ಕೊಡದೇ ಇರೋದೇ ಇಲ್ಲ. ಇದೀಗ ತಮ್ಮ ಕುಟುಂಬದೊಂದಿಗಿನ ಬಾಂಧವ್ಯದ ಬಗ್ಗೆ ಸಲ್ಲು ಬಾಯ್ಬಿಟ್ಟಿದ್ದಾರೆ.
ನನ್ನ ವ್ಯಕ್ತಿತ್ವ ಹೀಗಿರೋದಕ್ಕೆ ಕಾರಣ ನನ್ನ ಸಹೋದರರು, ಸಹೋದರಿಯರು, ಅಪ್ಪ ಹಾಗೂ ಅಮ್ಮ. ಅವರ ವ್ಯಕ್ತಿತ್ವದ ಸಣ್ಣ ಸಣ್ಣ ಚೂರುಗಳು ನನ್ನಲ್ಲಿ ಸೇರಿಕೊಂಡಿವೆ.ಇವರೆಲ್ಲಾ ಇಲ್ಲದೇ ಇದ್ರೆ ನೀವು ಸಲ್ಮಾನ್ ಖಾನ್ ಅವರನ್ನು ನೋಡೋದಕ್ಕೆ ಸಾಧ್ಯಾನೇ ಇಲ್ಲ. ಇವರೆಲ್ಲಾ ಇಲ್ಲ ಅಂದ್ರೆ ನಾನೇನೂ ಅಲ್ಲ. ನಾನು ಇವತ್ತು ಹೀಗಿರೋದಕ್ಕೆ ಕಾರಣ ನನ್ನ ಕುಟುಂಬ ಅಂತಾ ಸಲ್ಲು ಹೇಳಿದ್ದಾರೆ.
ಇವತ್ತು ಸೋಹೈಲ್ ಖಾನ್, ಅರ್ಬಾಜ್ ಖಾನ್,ಅರ್ಪಿತಾ, ಅಲ್ವಿರಾ, ಸಲ್ಮಾ ಹಾಗೇ ಸಲೀಂ ಖಾನ್ ಅವರು ನನ್ನ ಲೈಫ್ ನಲ್ಲಿ ಇಲ್ಲಾ ಅಂದ್ರೆ ನಾನೇನು ಇಲ್ಲ. ಇವರೆಲ್ಲಾ ನನ್ನ ಜೀವನದಲ್ಲಿ ಇರೋದರಿಂದಲೇ ನನ್ನ ಜೀವನ ಇಷ್ಟೊಂದು ಸುಂದರವಾಗಿದೆ ಅಂತಾ ಸಲ್ಮಾನ್ ಖಾವ್ ಅವರು ಹೇಳಿದ್ದಾರೆ. ಆ ಮೂಲಕ ತನ್ನ ಯಶಸ್ಸಿನಲ್ಲಿ ಕುಟುಂಬ ಎಷ್ಟು ಪ್ರಮುಖವಾದದ್ದು ಅಂತಾ ಸಲ್ಲು ಬಹಿರಂಗಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ