Select Your Language

Notifications

webdunia
webdunia
webdunia
webdunia

ನನ್ನ ತಂದೆ ನಾನು ಕ್ರಿಕೆಟರ್ ಆಗಬೇಕು ಎಂದು ಬಯಸಿದ್ದರು- ಸಲ್ಮಾನ್ ಖಾನ್

ನನ್ನ ತಂದೆ ನಾನು ಕ್ರಿಕೆಟರ್  ಆಗಬೇಕು ಎಂದು ಬಯಸಿದ್ದರು- ಸಲ್ಮಾನ್ ಖಾನ್
ಮುಂಬೈ , ಮಂಗಳವಾರ, 19 ಜುಲೈ 2016 (12:03 IST)
ಸಲ್ಮಾನ್ ಖಾನ್ ಬಾಲಿವುಡ್‌ನ ಬಹು ಬೇಡಿಕೆಯ ನಟ. ಸಲ್ಮಾನ್ ಖಾನ್ ಅವರ ಸಿನಿಮಾ ಅಂದ್ರೆ ಸಾಕು ಜನ ಅದನ್ನು ನೋಡೋದಕ್ಕೆ ಮುಗಿ ಬೀಳ್ತಾರೆ. ಇವತ್ತು ಸಲ್ಮಾನ್ ಖಾನ್ ಅವರು ಬಾಲಿವುಡ್ ಸೂಪರ್ ಸ್ಟಾರ್.ಆದ್ರೆ ಅವರ ತಂದೆಗೆ ಮಾತ್ರ ಸಲ್ಮಾನ್ ಖಾನ್ ಅವರು ನಟನಾಗೋದು ಇಷ್ಟವಿರಲಿಲ್ಲವಂತೆ.

ಸಲ್ಮಾನ್ ಖಾನ್ ಅವರು ಇಂತಹದ್ದೊಂದು ಇಂಟರೆಸ್ಟಿಂಗ್ ವಿಟಾರವೊಂದನ್ನು ಇದೀಗ ಹೊರಹಾಕಿದ್ದಾರೆ.ಸುಲ್ತಾನ್ ಸಿನಿಮಾದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್ ಅವರನ್ನು ಅವರ ತಂದೆ ಕ್ರಿಕೆಟರ್ ಆಗಿ ಮಾಡಬೇಕು ಅಂತಾ ಬಯಸಿದ್ದರಂತೆ.

ಸಲ್ಲು ಟೀಮ್ ಇಂಡಿಯಾಕ್ಕೆ ಆಡಬೇಕು ಅನ್ನೋದು ಸಲೀಂ ಖಾನ್ ಅವರ ಆಸೆಯಾಗಿತ್ತಂತೆ.ಆದ್ರೆ ಆಗಿದ್ದೇ ಬೇರೆ ಸಲ್ಮಾನ್ ಖಾನ್ ಅವರು ಬಾಲಿವುಡ್ ಸ್ಟಾರ್ ಆದ್ರು.

ಇನ್ನು ಕ್ರಿಕೆಟ್ ಆಗಿ ಮಾಡಬೇಕು ಅಂತಾ ಸಲೀಂಖಾನ್ ಸಲ್ಲುನನ್ನು ಪ್ರತಿದಿನ ಬೆಳಗ್ಗೆ 5-30ಕ್ಕೆ ಕ್ರಿಕೆಟ್ ಮೈದಾನಕ್ಕೆ ಕರೆದುಕೊಂಡು ಹೋಗುತ್ತಿದ್ದರಂತೆ.
 
ಸಲ್ಮಾನ್ ಖಾನ್ ಅವರು ತುಂಬಾನೇ ಚೆನ್ನಾಗಿ ಕ್ರಿಕೆಟ್ ಆಡುತ್ತಿದ್ದರಂತೆ.ಆದ್ರೆ ಯಾವಾಗ ಅವರ ತಂದೆ ಮಗ ಕ್ರಿಕೆಟ್ ಆಡೋದನ್ನು ನೋಡೋದಕ್ಕೆ ಬರುತ್ತಿದ್ದರೋ ಆ ದಿನ ಮಾತ್ರ ಸಲ್ಲು ತುಂಬಾ ಕೆಟ್ಟದಾಗಿ ಕ್ರಿಕೆಟ್ ಆಡುತ್ತಿದ್ದರಂತೆ. ಈ ಕ್ರಿಕೆಟ್ ನಲ್ಲಿ ಸಲ್ಲು ತೋರುತ್ತಿದ್ದ ನಿರಾಸಕ್ತಿ ಅವರನ್ನು ಬಾಲಿವುಡ್ ಅಂಗಳಕ್ಕೆ ಕರೆ ತಂದಿತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಬ್ಬುಲಿಗೆ ತಟ್ಟಿದ ಕಾಶ್ಮೀರದ ಗಲಭೆಯ ಬಿಸಿ