ಬಾಲಿವುಡ್ ಖ್ಯಾತ ನಟ ಸಲ್ಲು ಭಾಯಿಜಾನ್ ಮದುವೆಯಾಗುತ್ತಿದ್ದಾರೆ. ನವೆಂಬರ್ 18ಕ್ಕೆ ಸಲ್ಮಾನ್ ಶಾದಿ ಕಡೆಗೂ ಡೇಟ್ಸ್ ಫಿಕ್ಸ್ ಆಗಿದೆ. ಸಲ್ಲು ಯಾವಾಗ ಮದುವೆಯಾಗ್ತಾರೆ ಎನ್ನುತ್ತಿದ್ದ ಜನರಿಗೆ ಸಲ್ಲು ಉತ್ತರ ನೀಡಿದ್ದಾರೆ. ತಮ್ಮ ಬಹುದಿನದ ಗೆಳತಿ ಲೂಲಿಯಾ ವೆಂಟೂರ್ ಅವರನ್ನು ವರಿಸಲು ಮುಂದಾಗಿದ್ದಾರೆ.
ವಿಷ್ಯ ತಿಳಿದ ಸಲ್ಮಾನ್ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ. ಸಲ್ಮಾನ್ ತಮ್ಮ ಮದುವೆಯ ದಿನಾಂಕವನ್ನು ಕಡೆಗೂ ಫಿಕ್ಸ್ ಮಾಡಿದ್ದಾರೆ. ಸಲ್ಮಾನ್ ಖಾನ್ ಒಂದು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್‌ನ ಹಲವು ದಿಗ್ಗಜರು ಭಾಗಿಯಾಗಿದ್ದರು. ಈ ವೇಳೆ ಖುದ್ದು ಸಲ್ಮಾನ್ ಖಾನ್ ತಮ್ಮ ಶಾದಿ ದಿನಾಂಕವನ್ನು ಫಿಕ್ಸ್ ಮಾಡಿದ್ದಾರೆ.
ತುಂಬಾ ದಿನಗಳಿಂದ ಸಲ್ಮಾನ್ ಖಾನ್ ಜತೆ ಇವತ್ತು ಲೂಲಿಯಾ ವೆಂಟೂರ್ ಜತೆಯಾಗಿ ಕಾಣಿಸಿಕೊಂಡ್ರು. ಸಲ್ಮಾನ್ ಇದೇ ವರ್ಷದಂದು ಮದುವೆಯಾಗ್ತಾರೆ ಅಂತ ಹೇಳಲಾಗುತ್ತಿತ್ತು.. ಅಂತೂ ಇಂತು ಸಲ್ಮಾನ್ ಜತೆ ಸಪ್ತಪತಿ ತುಳಿಯೋ ಆ ಹುಡುಗಿ ಯಾರು ಎಂಬುವುದಕ್ಕೆ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದಂತಾಗಿದೆ. ಸಲ್ಮಾನ್ ಖಾನ್ ಲೂಲಿಯಾರನ್ನೇ ಮದುವೆಯಾಗಲಿದ್ದಾರೆ ಎಂದು ಖಚಿತವಾದಂತಾಗಿದೆ.
ಅಲ್ಲದೇ ಸಲ್ಮಾನ್ ಖಾನ್ ಇದೀಗ ಎಲ್ಲಾ ರೂಮರ್ಸ್‌ಗೂ ತೆರೆ ಬಿದ್ದಂತಾಗಿದೆ.ಲೂಲಿಯಾ ಇತ್ತೀಚೆಗೆ ಸಲ್ಮಾನ್ ಖಾನ್, ಹಾಗೂ ಸಲ್ಮಾ ಖಾನ್ ಜತೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ರೋಮ್ಯಾನಿಯನ್ ಬ್ಯೂಟಿ ಜತೆ ಸಲ್ಮಾನ್ ಖಾನ್ ಮದುವೆಯಾಗ್ತಾರಾ? ಎಂಬ ಮಿಲಿಯನ್‌ರ ಪ್ರಶ್ನೆಗೆ ಅಂತು ತೆರೆ ಬಿದ್ದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ