ತೆರೆ ಕಂಡ ಮೂರೇ ದಿನದಲ್ಲೇ ಸಲ್ಮಾನ್ ಹಾಗೂ ಅನುಷ್ಕಾ ಅಭಿನಯದ 'ಸುಲ್ತಾನ್' ಚಿತ್ರ 100 ಕೋಟಿ ಕ್ಲಬ್‌ಗೆ ಸೇರಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕುಸ್ತಿಪಟುವಾಗಿ ಮಿಂಚಿದ್ದಾರೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರ ಈಗಾಗ್ಲೇ 100 ಕೋಟಿ ಸಂಪಾದನೆ ಮಾಡಿದೆ ಎಂದು ಹೇಳಲಾಗುತ್ತಿದೆ.
6 ಜುಲೈಗೆ ಚಿತ್ರ ತೆರೆ ಕಂಡಿತ್ತು. ಇಂದಿಗೆ ಚಿತ್ರ ರಿಲೀಸ್ ಆಗಿ ಮೂರು ದಿನ ಕಳೆದಿದೆ. ಮೂರು ದಿನದಲ್ಲೇ ಸುಲ್ತಾನ್ ಚಿತ್ರ 100 ಕೋಟಿ ಕಲೆಕ್ಷನ್‌ಗೆ ಎಂಟ್ರಿ ನೀಡಿದೆ ಎಂದು ಹೇಳಲಾಗುತ್ತಿದೆ. ಮೊದಲನೇಯ ದಿನಕ್ಕೆ ಸುಲ್ತಾನ್ ಚಿತ್ರ 100 ಕೋಟಿ ಗಳಿಕೆ ಕಂಡಿತ್ತು.
ಸುಲ್ತಾನ್' ಓಪನಿಂಗ್ ಡೇಲ್ಲಿ 40 ಕೋಟಿ ಕಲೆಕ್ಷನ್ ಮಾಡಿತ್ತು.ಈ ಮೂಲಕ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸೀಗುತ್ತಿದೆ. ಚಿತ್ರ ನೋಡಲು ಪ್ರೇಕ್ಷಕರು ಟಿಕೇಟ್ ಗಾಗಿ ಚಿತ್ರಮಂದಿರಗಳಲ್ಲಿ ಕ್ಯೂ ಅಲ್ಲಿ ನಿಂತು ಟಿಕೇಟ್ ಪಡೆದುಕೊಂಡು ಸಿನಿಮಾ ವೀಕ್ಷಿಸಲು ಮುಂದಾಗಿರುವುದು ಕಂಡು ಬಂದಿದೆ.
ಚಿತ್ರದಲ್ಲಿ ಕುಸ್ತಿಪಟುವಾಗಿ ಪ್ರೇಕ್ಷಕರ ಗಮನ ಸೆಳೆದಿರುವ ಸಲ್ಲು ಪ್ರತಿಯೊಂದು ಆ್ಯಕ್ಷನ್ ಪಾತ್ರಗಳು ಸಿನಿ ರಸಿಕರಿಗೆ ಲೈಕ್ ಆಗ್ತಿದೆ ಎಂದು ತಿಳಿದು ಬಂದಿದೆ. ಬ್ಲಾಕ್ ಬಾಸ್ಟರ್ ಮೂವೀಗಳಲ್ಲಿ ಸುಲ್ತಾನ್ ಚಿತ್ರವು ಕೂಡ ಭರ್ಜರಿ ಕಲೆಕ್ಷನ್ ಮಾಡಲಿದೆ ಎಂಬುದು ಸಿನಿ ವಿಶ್ಲೇಷಕರು ತಿಳಿಸಿದ್ದಾರೆ.