ಒನ್ ನೈಟ್ ಸ್ಟ್ಯಾಂಡ್ ಚಿತ್ರದ ಬಳಿಕ ನಟಿ ಸನ್ನಿ ಲಿಯೋನ್ ಮತ್ತೆ ಥ್ರೀಲ್ಲರ್ 'ಬೇಮಾನ್ ಲವ್' ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಚಿತ್ರದ ಟ್ರೇಲರ್ ಮೊನ್ನೆ ರಿಲೀಸ್ ಆಗಿತ್ತು. ಈ ಟ್ರೇಲರ್‌ನಲ್ಲಿ ಸನ್ನಿ ಲಿಯೋನ್ ಬಬ್ಲಿಯಾಗಿ ಹಾಗೂ ಹಾಟ್ ಆಗಿ ಕಾಣಿಸಿಕೊಂಡಿದ್ದು, ಸೇಡು ತಿರಿಸಿಕೊಳ್ಳುವ ಪಾತ್ರದಲ್ಲಿ ಸಹ ಮಿಂಚಿದ್ದಾರೆ.
ಈ ಚಿತ್ರದಲ್ಲಿ ಸನ್ನಿ ಲಿಯೋನ್ ವಿಶಿಷ್ಠ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಜೀವನದಲ್ಲಿ ಹಲವು ಹಂತಗಳು ಬಗ್ಗೆ ಹಾಗೂ ಸ್ವಂತ ನಿರ್ಧಾರ ಕೈಗೊಳ್ಳುವ ಬಗ್ಗೆ ಚಿತ್ರ ಬಿಂಬಿಸಲಿದೆ. ಇದೊಂದು ಡಾರ್ಕ್ ಲವ್ ಸ್ಟೋರಿ ಎನ್ನುವ ಸನ್ನಿ, ಈ ಚಿತ್ರವು ಆಂಬಿಷಿನ್, ಸೇಡು, ಉತ್ಸಾಹ, ಪ್ಯಾಶನ್ ಹಲವು ವಿಶಿಷ್ಠವಾಗಿ ತೋರ್ಪಡಿಸಲಿದೆ ಎಂದು ಸನ್ನಿ ಲಿಯೋನ್ ತಿಳಿಸಿದ್ದಾರೆ.
ಇನ್ನೂ ಅಚ್ಚರಿ ಎಂದ್ರೆ ಸನ್ನಿ ಪತಿ ಡೇನಿಯಲ್ ವೆಬ್ಬರ್ ಈ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಫೆಬ್ರುವರಿಯಲ್ಲಿ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಹಾಡುಗಳ ರೆಕಾರ್ಡಿಂಗ್ ಈ ತಿಂಗಳಲ್ಲಿ ನಡೆಯಲಿದ್ದು, ಚಿತ್ರದಲ್ಲಿ ಸನ್ನಿಯ ಬೋಲ್ಡ್ ಹಾಗೂ ಸೇಡು ತೀರಿಸಿಕೊಳ್ಳುವ ಹಾಗೂ ಸೂರ್ತಿದಾಯಕ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬ ನಟ ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಅವರು ಯಾರು ಎಂಬುದು ಹೇಳಲಾಗುವುದಿಲ್ಲ ಎಂದು ಚಿತ್ರ ರಾಜೀವ್ ಚೌಧರಿ ಈ ಚಿತ್ರವನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ