Select Your Language

Notifications

webdunia
webdunia
webdunia
webdunia

'ಸಾಯಿರತ್ 'ಮರಾಠಿ ಚಿತ್ರದ ನಟಿ ರಿಂಕೂ,ನಟ ಆಕಾಶ್‌ಗೆ ತಲಾ 4 ಲಕ್ಷ ಬೋನಸ್

'ಸಾಯಿರತ್ 'ಮರಾಠಿ ಚಿತ್ರದ ನಟಿ ರಿಂಕೂ,ನಟ ಆಕಾಶ್‌ಗೆ ತಲಾ 4 ಲಕ್ಷ ಬೋನಸ್
ಮುಂಬೈ , ಶುಕ್ರವಾರ, 20 ಮೇ 2016 (19:40 IST)
ಚಿತ್ರದಲ್ಲಿ ಉತ್ತಮ ನಟನೆ ತೋರಿದ್ದಕ್ಕಾಗಿ ಮರಾಠಿ ಚಿತ್ರ  'ಸಾಯಿರತ್' ನಟ ಹಾಗೂ ನಟಿಗೆ ತಲಾ 4 ಲಕ್ಷ ಬೋನಸ್ ನೀಡಲಾಗುತ್ತಿದೆ. ಅವೋಘ ಅಭಿನಯಕ್ಕಾಗಿ ಚಿತ್ರದಲ್ಲಿ 'ರಿಂಕು ರಾಜ್‌ಗುರು' ಮತ್ತು 'ಆಕಾಶ್ ತೋಸರ್‌'ಗೆ ನಿರ್ಮಾಪಕರು 5 ಕೋಟಿ ಬೊನಸ್ ನೀಡಲು ನಿರ್ಧರಿದ್ದಾರಂತೆ.

 
ಕ್ಲಾಸಿಕಲ್ ಪ್ರೇಮಕತೆ ಹೊಂದಿರುವ ಸಿನಿಮಾದಲ್ಲಿ ರಿಂಕು ರಾಜ್ ಗುರು ಮತ್ತು ಆಕಾಶ್ ತೋಸಾರ್ ಅಭಿನಯಿಸಿದ್ದಾರೆ.ಈ ಸಿನಿಮಾದಲ್ಲಿನ ಅದ್ಫುತ ನಟನೆಗಾಗಿ ರಿಂಕು ರಾಜ್ ಗುರುಗೆ ರಾಷ್ಟ್ರ ಪ್ರಶಸ್ತಿ ದೊರಕಿದೆ.
 
ನಾಗರಾಜ್ ಪೋಪಟ್ ರಾವ್ ಮಂಜುಳೆ ನಿರ್ದೇಶಿಸಿರುವ ಮರಾಠಿಯ 'ಸಾಯಿರತ್' ಸಿನಿಮಾ ಬಿಡುಗಡೆಯಾದ 11 ದಿನದಲ್ಲೇ ದಾಖಲೆ ಬರೆದಿತ್ತು. 41 ಕೋಟಿ ಗಳಿಕೆ ಕಾಣುವ ಮೂಲಕ ಬಾಲಿವುಡ್ ದಿಗ್ಗಜರನ್ನೇ ಬೆಚ್ಚಿಬೀಳಿಸಿತ್ತು. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಕೊಳ್ಳೆ ಹೊಡೆದಿತ್ತು. ಆದ್ದಿರಿಂದ ದೇಶದೆಲ್ಲೆಡೆ ಪ್ರಶಂಶೆಗಳು ವ್ಯಕ್ತವಾಗಿದ್ದವು.
 
ಇನ್ನೂ ಮಹಾರಾಷ್ಟ್ರದಾಂದತ್ಯ ಸುಮಾರು 450 ಸ್ಕ್ರೀನ್‌ಗಳಲ್ಲಿ ಮರಾಠಿಯ 'ಸಾಯಿರತ್' ಸಿನಿಮಾ ರಿಲೀಸ್ ಆಗಿತ್ತು. ದೇಶಾದ್ಯಂತ ಸುಮಾರು 200 ಸ್ಕ್ರೀನ್ ಗಳಲ್ಲಿ ಸಬ್ ಟೈಟಲ್ ಜತೆಗೆ ಸಿನಿಮಾವನ್ನು ಬಿಡುಗಡೆ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಕಾಮಿಡಿ' ಚಿತ್ರಕ್ಕಾಗಿ ರಾಧಿಕಾ ಆಪ್ಟೆಗೆ ಆಫರ್