ಬಾಲಿವುಡ್ ನಟಿ ರಾಧಿಕಾ ಆಪ್ಟೆಗೆ 'ಸೆಕ್ಸ್ ಕಾಮಿಡಿ' ಆಧಾರಿತ ಚಿತ್ರದಲ್ಲಿ ನಟಿಸುವಂತೆ ಆಫರ್ ಬಂದಿದೆಯಂತೆ... 'ರಾಧಿಕಾ ಆಪ್ಟೆ ಉತ್ತಮವಾದ ಸ್ಕ್ರೀಪ್ಟ್ ಹೊಂದಿದ್ದು, ಚಿತ್ರಕ್ಕಾಗಿ ಆಫರ್ ನೀಡಲಾಗಿದೆಯಂತೆ'.!
ಆಫರ್ ಕುರಿತಂತೆ ಮಾತನಾಡಿರುವ ರಾಧಿಕಾ ಆಪ್ಟೆ.. 'ನನಗೆ ಸೆಕ್ಸ್ ಕಾಮಿಡಿ ಆಧಾರಿತ ಚಿತ್ರಕ್ಕಾಗಿ ಆಫರ್ ಬಂದಿದೆ ಎಂದು ತಿಳಿಸಿದ್ದಾರೆ. ಇನ್ನೂ ರಾಧಿಕಾ ಆಪ್ಟೆ ಮುಂದಿನ ಚಿತ್ರ ಫೋಬಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಧಿಕಾರ ಮೂರನೇ ಥ್ರೀಲ್ಲರ್ ಚಿತ್ರ ಅಂತ ಹೇಳಲಾಗ್ತಿದ್ದು, ಬಾದಲಾಪುರ್ ಬಳಿಕ ರಾಧಿಕಾಗೆ ಈ ಆಫರ್ ಬಂದಿದೆ.
ಇನ್ನೂ ಸೂಪರ್ ಸ್ಟಾರ್ ರಜನಿಕಾಂತ್ ಜತೆಗೆ ಕಬಾಲಿ ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾ ಆಪ್ಟೆ ರಜನಿಕಾಂತ್ ಅವರೊಬ್ಬ ಸ್ಪೂರ್ತಿದಾಯಕವಾಗಿದ್ದಾರೆ ಎಂದು ಹೇಳಿದ್ದಾರೆ.
ಪಾ ರಂಜಿತ್ ನಿರ್ದೆಶನದ ರಜನಿಕಾಂತ್ ನಟಿಸಿರುವ ಕಬಾಲಿ ಚಿತ್ರದ ಶೂಟಿಂಗ್ ಮಲೇಷ್ಯಾದಲ್ಲಿ ನಡೆಸಲಾಗಿದೆ. ಇನ್ನೂ ಚಿತ್ರದಲ್ಲಿ ರಾಧಿಕಾ ಅಪ್ಟೆ, ಕಿಶೋರ್, ಕಲೈಯರಸನ್, ಧನಸಿಕಾ ಮತ್ತು ದಿನೇಶ್ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕಬಾಲಿ ಚಿತ್ರದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ ರಜನಿಯನ್ನು ವೀಕ್ಷಿಸಲು ಕಾತುರರಾಗಿದ್ದಾರೆ..