ಸಿನಿಮಾ ತಾರೆಯರು ತೆರೆ ಮೇಲೆ ನಮ್ಮನ್ನು ಕೆಲ ಗಂಟೆಗಳ ಕಾಲ ನಮ್ಮನ್ನು ಖುಷಿಗೊಳಿಸೋದಕ್ಕೆ ನಾನಾ ಕಸರತ್ತುಗಳನ್ನು ಮಾಡುತ್ತಾರೆ.ಎಷ್ಟು ಸಲ ನಟ ನಟಿಯರು ಸಿನಿಮಾದ ಶೂಟಿಂಗ್ ವೇಳೆ ಗಾಯಮಾಡಿಕೊಂಡು ನೋವು ಅನುಭವಿಸಿದ ಉದಾಹರಣೆಗಳು ಸಾಕಷ್ಟಿವೆ.
ಇದೀಗ ಅಂತಹದ್ದೇ ಉದಾಹರಣೆ ಅಭಿಷೇಕ್ ಬಚ್ಚನ್ ಅವರದ್ದು. ಹೌಸ್ ಫುಲ್-3 ಸಿನಿಮಾದ ಶೂಟಿಂಗ್ ವೇಳೆ ಅವರಿಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಇದೀಗ ಅವರು ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ.
ಹೌಸ್ ಫುಲ್ -3 ಸಿನಿಮಾದ ಶೂಟಿಂಗ್ ವೇಳೆ ಅಭಿಷೇಕ್ ಬಚ್ಚನ್ ಅವರಿಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಬೆನ್ನುನೋವು ತೀವ್ರವಾದ ಕಾರಣ ಛೋಟಾ ಬಿ ಬರೋಬ್ಬರಿ ಒಂದು ತಿಂಗಳುಗಳ ಕಾಲ ಶೂಟಿಂಗ್ ಗೆ ವಿಶ್ರಾಂತಿ ನೀಡಿದ್ದ್ರು. ಇದೀಗ ಬೆನ್ನುನೋವು ಕಡಿಮೆಯಾಗಿರೋದರಿಂದ ಅವರು ಮತ್ತೆ ಶೂಟಿಂಗ್ ಗೆ ಹಾಜರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಒಂದು ತಿಂಗಳುಗಳ ಭರ್ಜರಿ ರೆಸ್ಟ್ ನ ಬಳಿಕ ನಾನು ಶೂಟಿಂಗ್ ಗೆ ಬಂದಿದ್ದೇನೆ. ನಾನೀಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಅಂತಾ ಅವರು ಹೇಳಿಕೊಂಡಿದ್ದೆ.ಆ ಮೂಲಕ ಆಮ್ ಫಿಟ್ ಆಂಡ್ ಫೈನ್ ಅಂತಾ ಹೇಳಿದ್ದಾರೆ ಅಭಿಷೇಕ್.
ಅಭಿಷೇಕ್ ಈ ಹಿಂದೆ 2015ರಲ್ಲಿ ತೆರೆ ಕಂಡ ಆಲ್ ಈಸ್ ವೆಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಅದರ ಬಳಿಕ ಸಾಜಿದ್ ಹಾಗೂ ಫರ್ಹಾದ್ ಅವರ ಹೌಸ್ ಫುಲ್ -3 ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ.ಇದರಲ್ಲಿ ಅಕ್ಷಯ್ ಕುಮಾರ್ , ರಿತೀಶ್ ದೇಶ್ ಮುಖ್,ಜಾಕ್ವೆಲಿನ್ ಫೆರ್ನಾಂಡೀಸ್,ನರ್ಗೀಸ್ ಫಕ್ರಿ,ಲೀಸ ಹೆಡೆನ್ ಮುಂತಾದವರು ಜೊತೆಯಾಗಿ ಅಭಿನಯಿಸುತ್ತಿದ್ದಾರೆ.