ಬಾಲಿವುಡ್ ನಲ್ಲಿ ತನ್ನ ನಟನೆಯಿಂದ ಹೇಗೆ ಶ್ರದ್ಧಾ ಕಪೂರ್ ಗುರುತಿಸಿಕೊಂಡಿದ್ದಾರೋ ಹಾಗೇ ತಮ್ಮ ಗಾಯನದ ಮೂಲಕವೇ ಗಮನ ಸೆಳೆದಿದ್ದಾರೆ ಶ್ರದ್ಧಾ ಕಪೂರ್.ಈಗಾಗಲೇ ಶ್ರದ್ಧಾ ಕಪೂರ್ ಅವರು ಹಾಡಿರುವ ಅನೇಕ ಹಾಡುಗಳು ಬಾಲಿವುಡ್‌ನಲ್ಲಿ ಹಿಟ್ ಹಾಡುಗಳು ಅನಿಸಿಕೊಂಡಿವೆ. ಇದರಿಂದ ಶ್ರದ್ಧಾ ಕಪೂರ್ ಅವರು ಕೂಡ ಫುಲ್ ಖುಷಿಯಾಗಿದ್ದಾರೆ.
ಅದರಲ್ಲೂ ಇತ್ತೀಚೆಗೆ ರಿಲೀಸ್ ಆಗಿರುವ ಶ್ರದ್ಧಾ ಕಪೂರ್ ಅಭಿನಯದ ಬಾಘೀ ಸಿನಿಮಾದ ಸಬ್ ತೇರಾ ಸಾಂಗ್ ಅಂತೂ ಎಲ್ಲರ ಫೇವರೆಟ್ ಹಾಡು ಅನ್ನಿಸಿಕೊಂಡಿದೆ.ಹಾಗಾಗಿ ತಾವು ಹಾಡಿರುವ ಹಾಡುಗಳು ಹಿಟ್ ಆಗಿರೋದಕ್ಕೆ ನನಗೆ ನಿಜಕ್ಕೂ ಖುಷಿಯಾಗುತ್ತಿದೆ ಅಂತಾ ಶ್ರದ್ಧಾ ಕಪೂರ್ ಅವರು ಹೇಳಿದ್ದಾರೆ. ಅಲ್ಲದೇ ಈ ಹಾಡನ್ನು 10 ಮಿಲಿಯನ್ ಮಂದಿ ಯೂ ಟ್ಯೂಬ್ ನಲ್ಲಿ ನೋಡಿದ್ದಾರೆ. ಹಾಗಾಗಿ ದಾಖಲೆ ಕೂಡ ನಿರ್ಮಿಸಿದೆ ಈ ಹಾಡು. ಈ ಹಾಡನ್ನು ಶ್ರದ್ಧಾ ಕಪೂರ ಹಾಗೂ ಅರ್ಮಾನ್ ಮಲ್ಲಿಕ್ ಅವರು ಹಾಡಿದ್ದಾರೆ. ಇದು ಬಾಲಿವುಡ್ ನ ಈ ವರ್ಷದ ಸೂಪರ್ ಹಿಟ್ ಹಾಡುಗಳಲ್ಲಿ ಒಂದು ಅಂತಾ ಗುರುತಿಸಿಕೊಂಡಿದೆ.
ಇನ್ನು ಹಾಡು ಇಷ್ಟೊಂದು ಹಿಟ್ ಆಗಿರೋದಕ್ಕೆ ನನಗೆ ಯಾವು ರೀತಿ ಖುಷಿ ವ್ಯಕ್ತಪಡಿಸಬೇಕು ಅನ್ನೋದು ಗೊತ್ತಾಗುತ್ತಿಲ್ಲ ಅಂತಾ ಅವರು ಹೇಳಿದ್ದಾರೆ. ನನಗೆ ಮಾತುಗಳೋ ಹೊರಡುತ್ತಿಲ್ಲ ಅಂತಾ ಅವರು ಹೇಳಿದ್ದಾರೆ. ಹಾಗಂಥ ನಾನು ಹಾಡುಗಾರಿಕೆಯಲ್ಲಿ ಸಾಧಿಸಬೇಕಾಗಿರೋದು ಇನ್ನೂ ಸಾಕಷ್ಟಿದೆ ಅಂತಾ ಶ್ರದ್ಧಾ ಕಪೂರ್ ಅವರು ಹೇಳಿಕೊಂಡಿದ್ದಾರೆ.