Select Your Language

Notifications

webdunia
webdunia
webdunia
webdunia

ಕ್ಯಾಲೆಂಡರ್ ಅಲಂಕರಿಸಿದ ರೆಡ್ ಹಾಟ್ ಸನ್ನಿ ಲಿಯೋನ್

ಕ್ಯಾಲೆಂಡರ್ ಅಲಂಕರಿಸಿದ ರೆಡ್ ಹಾಟ್ ಸನ್ನಿ ಲಿಯೋನ್
Mumbai , ಶನಿವಾರ, 14 ಜನವರಿ 2017 (12:01 IST)
ಸೆಲೆಬ್ರಿಟಿ ಫೋಟೋಗ್ರಾಫರ್ ದಾಬೂ ರತ್ನಾನಿ ಕ್ಲಿಕ್ಕಿಸಿರುವ ಫೋಟೋಗಳಿಗೆ ಬಲು ಬೇಡಿಕೆ ಇದೆ. ಇವರು ಪ್ರತಿವರ್ಷ ಸೆಲೆಬ್ರಿಟಿಗಳ ಕ್ಯಾಲೆಂಡರ್ ಹೊರತರುತ್ತಾರೆ. ಇದಕ್ಕಂತೂ ಸಿಕ್ಕಾಪಟ್ಟೆ ಡಿಮ್ಯಾಂಡ್. ಈ ಬಾರಿಯ ಕ್ಯಾಲೆಂಡರಂತೂ ಹಾಟ್ ಬೆಡಗಿಯರಿಂದ ತುಂಬಿ ತುಳುಕುತ್ತಿದೆ.
 
ಈ ಸಲದ 2017ರ ಕ್ಯಾಲೆಂಡರ್ ಗರ್ಲ್ ಆಗಿ ಸನ್ನಿ ಲಿಯೋನ್ ಸಹ ಸ್ಥಾನ ಪಡೆದಿದ್ದಾರೆ. ಕ್ಯಾಲೆಂಡರ್‌ನಲ್ಲಿ ಸನ್ನಿ ಇದ್ದಾರೆ ಎಂದರೆ ವಿಶೇಷತೆ ಇರಲೇಬೆಕಲ್ಲವೆ? ಅದರಲ್ಲೂ ದಾಬೂ ರತ್ನಾನಿ ಅವರಂತಹ ಕ್ಯಾಮೆರಾ ಕಣ್ಣಲ್ಲಿ ಸನ್ನಿ ಸೆರೆಹಿಡಿಯುವುದೆಂದರೆ ಎಂಥಹವರಿಗೂ ಕುತೂಹಲ.
 
ಒಟ್ಟಾರೆ ಸನ್ನಿಯ ಚೆಲುವಿಗೆ ತಕ್ಕಂತೆ ದಾಬೂ ರತ್ನಾನಿ ಸೆರೆಹಿಡಿದ್ದು, ಈಗ ಅಂತರ್ಜಾಲದಲ್ಲಿ ಎಲ್ಲರ ಕಣ್ಣುಕುಕ್ಕುತ್ತಿದೆ. ಈ ಫೋಟೋವನ್ನು ಸ್ವತಃ ಸನ್ನಿ ಲಿಯೋನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಭಿಮಾನಿ ಸಮೂಹದೊಂದಿಗೆ ಹಂಚಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶ ಚುನಾವಣೆಗೆ ಸನ್ನಿ ಲಿಯೋನ್ ಸ್ಪರ್ಧೆ!