Webdunia - Bharat's app for daily news and videos

Install App

ಮತ್ತೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ, ಮೂಲ ಮರೆತ ನ್ಯಾಶನಲ್ ಕ್ರಶ್‌ಗೆ ಹಿಗ್ಗಾಮುಗ್ಗಾ ತರಾಟೆ

Sampriya
ಶುಕ್ರವಾರ, 14 ಫೆಬ್ರವರಿ 2025 (19:44 IST)
Photo Courtesy X
ಬೆಂಗಳೂರು: ಕನ್ನಡ ಭಾಷೆ ಹಾಗೂ ಕನ್ನಡ ಫಿಲ್ಮ್ ಇಂಡಸ್ಟ್ರಿ ಬಗ್ಗೆ ಮಾತನಾಡಲು ಹಿಂಜರಿಯುವ  ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈ ವಿಚಾರವಾಗಿ ಮತ್ತೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಶ್ಮಿಕಾ ಅವರು 'ನಾನು ಹೈದರಾಬಾದ್​ನವಳು' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ರಶ್ಮಿಕಾ ಹೇಳಿಕೆ ಚರ್ಚೆಗೆ ಕಾರಣವಾಗಿದ್ದು, ಇದನ್ನು ಅನೇಕರು ಟ್ರೋಲ್ ಮಾಡಿದ್ದಾರೆ.

ಪುಪ್ಪ 2 ಸಕ್ಸಸ್ ಬಳಿಕ ಇದೀಗ ರಶ್ಮಿಕಾ ಮಂದಣ್ಣ ಅವರು 'ಛಾವಾ' ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜೊತೆ ನಟಿಸಿದ್ದಾರೆ. ಇಂದು ಈ ಸಿನಿಮಾ ಬಿಡುಗಡೆಗೊಂಡಿದ್ದು, ಚಿತ್ರದ ಈವೆಂಟ್‌ವೊಂದರಲ್ಲಿ ನಾನು ಹೈದರಾಬಾದ್​ನವಳು ಎಂದಿರುವುದು ಅನೇಕರ ಕೋಪಕ್ಕೆ ಕಾರಣವಾಗಿದೆ.

ವೇದಿಕೆಯಲ್ಲಿ ಮಾತನಾಡುತ್ತಾ ರಶ್ಮಿಕಾ, ನಾನು ಹೈದರಾಬಾದ್​ನವಳು. ನಾನು ಅಲ್ಲಿಂದ ಒಬ್ಬಂಟಿಯಾಗಿ ಬಂದಿದ್ದೇನೆ. ಬಹುಶಃ ನಾನು ಈಗ ನಿಮ್ಮ ಕುಟುಂಬದ ಭಾಗ ಆಗಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ.

ಇದಕ್ಕೆ ಕೆಲವರು ರಶ್ಮಿಕಾ ಅವರನ್ನು ಟ್ರೋಲ್ ಮಾಡಿದ್ದಾರೆ. ರಶ್ಮಿಕಾ ಯಾವಾಗ ಹೈದರಾಬಾದ್​ನವರಾದರು? ಇದನ್ನು ಜನನ ಪ್ರಮಾಣಪತ್ರದಲ್ಲಿ ಸೇರಿಸಿದ್ದಾರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಪ್ರೀತಿಗಾಗಿ ಊರನ್ನೇ ಮರೆತ ರಶ್ಮಿಕಾ’ ಎಂದು ಕೆಲವರು ಹೇಳಿದ್ದಾರೆ.

ನಿಮ್ಮನ್ನು ದ್ವೇಷಿಸಲು ನಿತ್ಯ ಹೊಸ ಹೊಸ ಕಾರಣ ನೀಡುತ್ತೀರಿ ಎಂದು ಕೆಲವರು ಹೇಳಿದ್ದಾರೆ. ಕೂರ್ಗ್ ನವರಾದ ನೀವು ನಿಮ್ಮ ಮೂಲ ಮರೆತಿದ್ದೀರಿ. ನಿಮಗೆ ಗೌರವ ಪಡೆದು ಕೊಳ್ಳುವ ಅರ್ಹತೆಯಿಲ್ಲ, ನಿಮಗೆ ನೈತಿಕತೆಯಿಲ್ಲ, ನಾಚಿಕೆಯಾಗಬೇಕು ಎಂದು ನೆಟಿಜನ್ ಒಬ್ಬರು ಕಮೆಂಟ್ ಮಾಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments