ಮುಂಬೈ: ತಮ್ಮ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಗಾಸಿಪ್ ಸುದ್ದಿಗಳಿಗೆ ಬಾಲಿವುಡ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತೆರೆ ಎಳೆದಿದ್ದಾರೆ.
ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ ಏರ್ಪಡಿಸಿದ್ದ ಪಾರ್ಟಿಯೊಂದರಲ್ಲಿ ಭಾಗವಹಿಸಿ ಕೈ ಕೈ ಹಿಡಿದು ಮರಳುವ ಫೋಟೋಗಳಿಂದ ಅವರಿಬ್ಬರು ಇನ್ನೂ ಪ್ರೇಮಿಗಳೇ ಎನ್ನುವುದು ಸಾಬೀತಾಗಿದೆ.
ತಮ್ಮ ಬೇಫಿಕರ್ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಇಬ್ಬರ ಪ್ರೇಮ ಸಂಬಂಧದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ರಣವೀರ್ ಮಧ್ಯದಲ್ಲೇ ಎದ್ದು ಹೋಗಿದ್ದು, ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಸುದ್ದಿಗೆ ಕಾರಣವಾಗಿತ್ತು. ಆದರೆ ಈ ಫೋಟೋ ನೋಡಿದ ಮೇಲೆ ಆ ಗಾಳಿ ಸುದ್ದಿ ನಿಜವಲ್ಲ ಎಂದು ಸಾಬೀತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ