Select Your Language

Notifications

webdunia
webdunia
webdunia
webdunia

ಮಲಯಾಳಂ ಸ್ಟಾರ್ ನಟ ದಿಲೀಪ್, ಕಾವ್ಯಾ ಮಾಧವನ್ ಮದುವೆ!

ಮಲಯಾಳಂ ಸ್ಟಾರ್ ನಟ ದಿಲೀಪ್, ಕಾವ್ಯಾ ಮಾಧವನ್ ಮದುವೆ!
Kocchi , ಶುಕ್ರವಾರ, 25 ನವೆಂಬರ್ 2016 (12:50 IST)
ಕೊಚ್ಚಿ: ಮಲಯಾಳಂ ಚಿತ್ರರಂಗದ ಖ್ಯಾತ ನಟ ದಿಲೀಪ್ ಮತ್ತು ನಟಿ ಕಾವ್ಯಾ ಮಾಧವನ್ ಶುಕ್ರವಾರ ಆಪ್ತೇಷ್ಟ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ಮೂಲಕ ಇವರಿಬ್ಬರೂ ಹಲವು ದಿನಗಳಿಂದ ಹರಡಿದ್ದ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ಸ್ವತಃ ಈ ವಿಷಯವನ್ನು ದಿಲೀಪ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.  ಮೀಶ ಮಾಧವನ್ ಸಿನಿಮಾ ಖ್ಯಾತಿಯ ಈ ಜೋಡಿ ಮಧ್ಯೆ ಅಫೇರ್ ಇರುವುದಕ್ಕೇ ದಿಲೀಪ್ ತಮ್ಮ ಮೊದಲ ಪತ್ನಿ ಖ್ಯಾತ ನಟಿ ಮಂಜು ವಾರಿಯರ್ ಗೆ ವಿಚ್ಛೇದನ ನೀಡಿದ್ದರು ಎಂಬ ಗಾಸಿಪ್ ಹರಡಿತ್ತು. ನಂತರ ಇವರಿಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಇದರಿಂದ ಕ್ರುದ್ಧರಾಗಿದ್ದ ದಿಲೀಪ್ ಮಾಧ್ಯಮಗಳ ವಿರುದ್ಧ ಕೇಸು ದಾಖಲಿಸಿದ್ದರು. ಈಗ ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಇದುವರೆಗೆ ಈ ಜೋಡಿ ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಈಗ ಸ್ವತಃ ದಿಲೀಪ್ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಅಂದ ಹಾಗೆ ಕಾವ್ಯಾ ಮಾಧವನ್ ಗೆ ಕೂಡಾ ಇದು ಎರಡನೇ ವಿವಾಹ. ಕಾವ್ಯಾ ಮೊದಲ ಪತಿಗೆ ವಿಚ್ಛೇದನ ನೀಡಲು ಕಾರಣ ಕೂಡಾ ದಿಲೀಪ್ ಜತೆಗಿನ ಅಫೇರ್ ಎಂದು ಗಾಸಿಪ್ ಹರಡಿತ್ತು.

ವಿಚ್ಛೇದನದ ಬಳಿಕ ದಿಲೀಪ್ ಮತ್ತು ಮಂಜು ವಾರಿಯರ್ ಪುತ್ರಿ ಮೀನಾಕ್ಷಿ ದಿಲೀಪ್ ಜತೆಯಲ್ಲೇ ಇರಲು ನಿರ್ಧರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಜತೆಯಾಗಿ ನಟಿಸಲಿದ್ದಾರೆ ಅಮಿತಾಭ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್