ಹೆಸರು ಕೊಟ್ಟ ಹಾಡನ್ನೇ ಮರೆತು ಟ್ರೋಲ್ ಗೊಳಗಾದ ರಾನು ಮೊಂಡಾಲ್

ಮಂಗಳವಾರ, 3 ಡಿಸೆಂಬರ್ 2019 (09:13 IST)
ಮುಂಬೈ: ರೈಲ್ವೇ ನಿಲ್ದಾಣದಲ್ಲಿ ಭಿಕ್ಷುಕಿಯಾಗಿದ್ದಾಕೆ ಸೋಷಿಯಲ್ ಮೀಡಿಯಾದಿಂದ ಏಕಾಏಕಿ ಸ್ಟಾರ್ ಆದ ಗಾಯಕಿ ರಾನು ಮೊಂಡಾಲ್ ಮತ್ತೆ ಟ್ರೋಲ್ ಗೊಳಗಾಗಿದ್ದಾರೆ.


ಆಕೆಗೆ ಹೊಸ ಜೀವನ, ಹೆಸರು ಕೊಟ್ಟಿದ್ದು ಹಿಮೇಶ್ ರೇಶಿಮಿಯಾ. ಹಿಮೇಶ್ ಸಂಗೀತ ನಿರ್ದೇಶನದಲ್ಲಿ ‘ತೇರಿ ಮೇರಿ’ ಹಾಡಿನ ಮೂಲಕ ರಾನು ಬಾಲಿವುಡ್ ಗೆ ಪರಿಚಯವಾದರು. ಆದರೆ ಕಾರ್ಯಕ್ರಮವೊಂದರಲ್ಲಿ ಈ ಹಾಡನ್ನು ಹಾಡಲು ಹೇಳಿದಾಗ ಸಾಹಿತ್ಯ ಮರೆತು ನಿಂತಿದ್ದಕ್ಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.

ರಾನುಗೆ ಪ್ರೇಕ್ಷಕರು ತೇರಿ ಮೇರಿ ಹಾಡಲು ಹೇಳಿದಾಗ ಆಯ್ತು ಎಂದ ಆಕೆ ಕೆಲವು ಕ್ಷಣ ಸುಮ್ಮನೇ ನಿಂತು, ನಂತರ ನನಗೆ ಹಾಡು ಮರೆತು ಹೋಗಿದೆ ಎಂದಾಗ ನೆರೆದಿದ್ದವರು ನಕ್ಕಿದ್ದರು. ಇದೂ ಸಾಲದೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ಆಕೆಯನ್ನು ಪರೀಕ್ಷೆ ದಿನ ಪಾಠ ಮರೆತು ಹೋಯಿತು ಎಂದಂತೆ ಮೆಮೆ ಮಾಡಿ ತಮಾಷೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮದಕರಿನಾಯಕ ಸಿನಿಮಾಗೆ ಚಾಲನೆ