ರಾಣಿ ಮುಖರ್ಜಿ ಆಕಸ್ಮಿಕವಾಗಿ ಆ್ಯಕ್ಟರ್ ಆಗಿದ್ದಾರಂತೆ..!

ನಾಗಶ್ರೀ ಭಟ್
ಗುರುವಾರ, 22 ಫೆಬ್ರವರಿ 2018 (16:04 IST)
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಣಿ ಮುಖರ್ಜಿ, ನಾನು ಆಕಸ್ಮಿಕವಾಗಿ ಆ್ಯಕ್ಟರ್ ಆದೆ. ನಾನು ಚಲನಚಿತ್ರಗಳಲ್ಲಿ ಅಭಿನಯಿಸುವುದು ನನ್ನ ತಾಯಿಯ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ.
"ನಾನೇ ನಿರ್ಧರಿಸಿರಲಿಲ್ಲ (ನಟಿಯಾಗುವುದನ್ನು), ನನ್ನ ಅಮ್ಮ ಇದನ್ನು ನಿರ್ಧರಿಸಿದ್ದರು. ನಾವು ಚಿಕ್ಕವರಿರುವಾಗ ಇರುವ ಪೀಳಿಗೆ ಬೇರೆಯದೇ ಆಗಿತ್ತು, ಇವಾಗಿನ ಹಾಗಲ್ಲ. ನಾನು ಆಜ್ಞಾಧಾರಕ ಮಗುವಾಗಿದ್ದೆ. ಆದ್ದರಿಂದ ನನ್ನ ಅಮ್ಮ ಏನು ಹೇಳಿದರೋ ಅದನ್ನು ಮಾಡಿದೆ, ಅವಳು ನಟಿಯಾಗಲು ಹೇಳಿದಳು, ಅದಕ್ಕೆ ನಟಿಯಾದೆ. ನನಗಿಂತ ಮೊದಲೇ ಅವರು ನನ್ನ ವಿಷಯವನ್ನು (ಅಭಿನಯ) ಅರಿತುಕೊಂಡಿದ್ದರು. ನಾನು ಆಕಸ್ಮಿಕವಾಗಿ ನಟಿಯಾದೆ. ಇಂದು ನನ್ನ ಅಮ್ಮನಿಗೆ ಧನ್ಯವಾದವನ್ನು ಹೇಳುತ್ತೇನೆ, ಏಕೆಂದರೆ ನಾನು ನಟಿಯಾಗುವುದನ್ನು ಹೊರತುಪಡಿಸಿ ಬೇರೆ ಏನಾಗುವುದನ್ನೂ ಯೋಚಿಸಲು ಸಾಧ್ಯವಿಲ್ಲ" ಎಂದು ರಾಣಿ ಮುಖರ್ಜಿ ತಮ್ಮ ಮುಂಬರಲಿರು ಚಿತ್ರದ ಪ್ರಚಾರದ ಸಮಾರಂಭದಲ್ಲಿ ತಾವು ಆಕಸ್ಮಿಕವಾಗಿ ಚಿತ್ರರಂಗವನ್ನು ಪ್ರವೇಶಿಸಿದ್ದರ ಕುರಿತು ಹೇಳಿಕೊಂಡರು.
 
ಈ ದಿನಗಳಲ್ಲಿ ಹುಡುಗಿಯರು ಸ್ವರಕ್ಷಣೆ ಕೌಶಲ್ಯಗಳನ್ನು ಕಲಿಯಬೇಕು ಎಂದು ರಾಣಿ ಸಲಹೆ ನೀಡಿದರು. ತಮ್ಮ ಮಗಳ ಬಗ್ಗೆ ಹೇಳುತ್ತಾ ತಮ್ಮ ಮಗಳು ಅದಿರಾಗೆ ಬಾಕ್ಸಿಂಗ್ ಮತ್ತು ಡ್ಯಾನ್ಸಿಂಗ್ ಅನ್ನು ಕಲಿಸಲು ಬಯಸುತ್ತೇನೆ ಎಂದು ಹೇಳಿದರು. "ಇಂದಿನ ಎಲ್ಲಾ ಹುಡುಗಿಯರು ಮಾರ್ಷಿಯಲ್ ಆರ್ಟ್ಸ್, ಸ್ವರಕ್ಷಣೆಯನ್ನು ಕಲಿಯಬೇಕು ಎಂದು ನಾನು ನಂಬುತ್ತೇನೆ ಮತ್ತು ಅದರ ನಂತರ ನೃತ್ಯವನ್ನು ಕಲಿಯಿರಿ. ಆದ್ದರಿಂದ ನನ್ನ ಮಗಳು ಇವೆರಡನ್ನೂ ಕಲಿಯಬೇಕೆಂದು ಬಯಸುತ್ತೇನೆ" ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ತನ್ನ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದ ರಾಣಿ ಮುಖರ್ಜಿ ಈಗ ಮತ್ತೆ ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ಮುಂದಿನ ಸುದ್ದಿ
Show comments