Select Your Language

Notifications

webdunia
webdunia
webdunia
webdunia

ರಂಗೂನ್ ಫಸ್ಟ್ ಲುಕ್ ಬಿಡುಗಡೆ...ಜ.6ಕ್ಕೆ ಟ್ರೇಲರ್

ರಂಗೂನ್ ಫಸ್ಟ್ ಲುಕ್ ಬಿಡುಗಡೆ...ಜ.6ಕ್ಕೆ ಟ್ರೇಲರ್
Mumbai , ಸೋಮವಾರ, 2 ಜನವರಿ 2017 (11:22 IST)
ಬಾಲಿವುಡ್ ನಟ ಸೈಫ್ ಆಲಿ ಖಾನ್, ಶಾಹಿದ್ ಕಪೂರ್, ಕಂಗನಾ ರನಾವತ್ ಮುಖ್ಯಪಾತ್ರಗಳನ್ನು ಪೋಷಿಸಿರುವ ಚಿತ್ರ ರಂಗೂನ್. ವಿಶಾಲ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಫಸ್ಟ್ ಲುಕ್ಕನ್ನು ಚಿತ್ರತಂಡ ಭಾನುವಾರ ಬಿಡುಗಡೆ ಮಾಡಿದೆ.
 
ಕೊನೆಯ ನಿರೀಕ್ಷೆಗೆ ತೆರೆಬಿದ್ದಿದೆ. ಇನ್ನು ಮುಂದೆ ರಂಗೂನ್ ಶುರು. ಟ್ರೇಲರನ್ನು ಜನವರಿ 6ಕ್ಕೆ ನೋಡಿ ಎಂದು ಶಾಹಿದ್ ಕಪೂರ್ ಟ್ವೇಟ್ ಮಾಡಿ ಫಸ್ಟ್ ಲುಕ್ಕನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ಸೈನಿಕರು ಹೋರಾಡುತ್ತಿರುವ ದೃಶ್ಯಗಳನ್ನು ತೋರಿಸಲಾಗಿದೆ.
 
ಎರಡನೇ ಮಹಾಯುದ್ಧ ಹಿನ್ನೆಲೆಯಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ವಿಶಾಲ್ ಭಾರದ್ವಾಜ್ ಸಂಗೀತ ಸಂಯೋಜನೆಯ ಈ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ವೀಕ್ಷಕರ ಮುಂದೆ ತರಲು ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಚಿತ್ರತಂಡ. ಸದ್ಯಕ್ಕೆ ಫಸ್ಟ್‌ಲುಕ್ ಮೇಲೆ ಒಂದು ಕಣ್ಣಾಕಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಬಿಡುಗಡೆ ಮಾಡಿದ ’ಮರಿಯಪ್ಪನ್’ ಪೋಸ್ಟರ್