Select Your Language

Notifications

webdunia
webdunia
webdunia
webdunia

ಶಾರುಖ್ ಬಿಡುಗಡೆ ಮಾಡಿದ ’ಮರಿಯಪ್ಪನ್’ ಪೋಸ್ಟರ್

ಶಾರುಖ್ ಬಿಡುಗಡೆ ಮಾಡಿದ ’ಮರಿಯಪ್ಪನ್’ ಪೋಸ್ಟರ್
Mumbai , ಸೋಮವಾರ, 2 ಜನವರಿ 2017 (09:22 IST)
ಈಗ ನೈಜ ಕಥೆ ಮತ್ತು ಜೀವನ ಕಥೆ ಆಧಾರಿತ ಚಿತ್ರಗಳು ಎಲ್ಲಾ ಭಾಷೆಗಳಲ್ಲೂ ಮೂಡಿಬರುತ್ತಿವೆ. ಮುಖ್ಯವಾಗಿ ಕ್ರೀಡಾಕಾರರ ಜೀವನವನ್ನು ತೆರೆಯ ಮೇಲೆ ಬಿಚ್ಚಿಡಲು ಸಿನಿಮಾ ದಿಗ್ದರ್ಶಕರು ಆಸಕ್ತಿ ತೋರುತ್ತಿದ್ದಾರೆ.
 
ಇದೀಗ ದಕ್ಷಿಣ ಭಾರತ ಕ್ರೀಡಾಪಟು ಮರಿಯಪ್ಪನ್ ತಂಗವೇಲು ಜೀವನಕಥೆ ಆಧಾರವಾಗಿ ಸಿನಿಮಾ ಒಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್‌ರನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿದ್ದಾರೆ.
 
2016ರಲ್ಲಿ ರಿಯೋದಲ್ಲಿ ನಡೆದ ಪ್ಯಾರಾ ಒಲಂಪಿಕ್ಸ್‌ನಲ್ಲಿ ಹೈಜಂಪ್‌ ವಿಭಾಗದಲ್ಲಿ ಬಂಗಾರದ ಪದಕ ಗೆದ್ದ ಭಾರತದ ಪಟು ಮರಿಯಪ್ಪನ್ ಜೀವನಕಥೆಯನ್ನು ತೆರೆಯ ಮೇಲೆ ತರುತ್ತಿದ್ದಾರೆ. ಈ ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರ ಐಶ್ವರ್ಯಾ ಧನುಷ್ ನಿರ್ಮಾಪಕಿ. 
 
ಚಿತ್ರದ ಪೋಸ್ಟರನ್ನು ಬಿಡುಗಡೆ ಮಾಡಿರುವ ಶಾರುಖ್, ಭಾರತದ ಹೀರೋ ಮರಿಯಪ್ಪನ್ ತಂಗವೇಲು ಜೀವನಕಥೆಯಾಧಾರಿತ ಚಿತ್ರ ಮರಿಯಪ್ಪನ್ ಫಸ್ಟ್ ಲುಕ್ ಪೋಸ್ಟರ್. ಆಲ್ ದ ಬೆಸ್ಟ್ ಐಶ್ವರ್ಯಾ ಧನುಷ್ ಎಂದು ಟ್ವೀಟಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಹನಿಮೂನ್‌ಗೆ ರೆಡಿಯಾದ ತಾರೆ