Select Your Language

Notifications

webdunia
webdunia
webdunia
webdunia

'ಕಬಾಲಿ' ಚಿತ್ರದ ಟೀಸರ್ ವೀಕ್ಷಿಸಿದ 10 ಮಿಲಿಯನ್ ಜನರು

Rajinikanth
ಮುಂಬೈ , ಬುಧವಾರ, 4 ಮೇ 2016 (17:12 IST)
ಕಬಾಲಿ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದೆ.. ಅಲ್ಲದೇ ಮೊನ್ನೆ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿತ್ತು.. ಈ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಅನ್ನು m 10 ಮಿಲಿಯನ್ ಜನರು ವೀಕ್ಷಿಸಿದ್ದಾರಂತೆ. ತಮಿಳು ಟೀಸರ್ ಇಷ್ಟರ ಮಟ್ಟಿಗೆ ಖ್ಯಾತಿ ಪಡೆದಿದೆ. ಇದ್ದರಿಂದ ತಿಳಿಯುತ್ತೆ ಇಂದಿಗೂ ರಜನಿ ಕಾಲಿವುಡ್‌ನ ಕಿಂಗ್ ಎಂದು.. 
ಟೀಸರ್ ಬಿಡುಗಡೆ ಕೇವಲ ಮೂರು ದಿನದಲ್ಲೇ ಕಬಾಲಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಮೂರು ದಿನದಲ್ಲೇ 10 ಮಿಲಿಯನ್ ಜನ್ರು ವೀಕ್ಷಿಸಿದ್ದಾರೆ. ಅಲ್ಲದೇ ಇಂದಿಗೂ ರಜನಿಕಾಂತ್ ತಮಿಳುಗರ ನೆಚ್ಚಿನ ನಟರಾಗಿದ್ದಾರೆ. 
 
ಚಿತ್ರದ ಹೊಸ ಪೋಸ್ಟರ್‌ನ್ನು ನಿರ್ಮಾಪಕ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ರಜನಿ ಮುಖ ಲಕ್ಷಣಗಳನ್ನು ನೋಡಿದ್ರೆ ಅಚ್ಚರಿ ಮೂಡಿಸುತ್ತೆ. ಯಾಕಂದ್ರೆ ತಲೈವಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ, ಡಾನ್ ಆಗಿ ಕೈಯಲ್ಲಿ ರಿವಾಲ್ವರ್ ಹಿಡಿದು ನಿಂತಿರುವ ಪೋಸ್ಟರ್‌ ಬಿಡುಗಡೆಯಾಗಿತ್ತು. 
 
ಚಿತ್ರದ ಒಂದೊಂದು ಪೋಸ್ಟರ್ ಸಾಕಷ್ಟು ಕ್ರೇಜ್ ಮೂಡಿಸಿದೆ. ಪೋಸ್ಚರ್‌ನಲ್ಲಿ ರಜನಿಕಾಂತ್‌ರ ಎಲ್ಲಾ ಆ್ಯಕ್ಷನ್‌ಗಳು ನೋಡುಗರನ್ನು ಮೋಡಿ ಮಾಡುವಂತಿವೆ.
 
ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ  ಬಹಳಷ್ಟು ಸದ್ದು ಮಾಡಿದೆ. ಪಾ ರಂಜಿತ್ ನಿರ್ದೆಶನದ ರಜನಿಕಾಂತ್ ನಟಿಸಿರುವ ಕಬಾಲಿ ಚಿತ್ರದ ಶೂಟಿಂಗ್ ಮಲೇಷ್ಯಾದಲ್ಲಿ ನಡೆಸಲಾಗಿದೆ. ಇನ್ನೂ ಚಿತ್ರದಲ್ಲಿ ರಾಧಿಕಾ ಅಪ್ಟೆ, ಕಿಶೋರ್, ಕಲೈಯರಸನ್, ಧನಸಿಕಾ ಮತ್ತು ದಿನೇಶ್ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
 
ಕಬಾಲಿ ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆಗಳಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟ ರಜನಿ ಅಭಿನಯದ ಚಿತ್ರ ವೀಕ್ಷಿಸಲು ಕಾತುರರಾಗಿದ್ದಾರೆ..
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಇದೇ ವರ್ಷಕ್ಕೆ ಶೂಟಿಂಗ್‌ ನಡೆಯಲಿದೆ ವರುಣ್ ಧವನ್ ಅಭಿನಯದ ಜುಡ್ವಾ-2 ಚಿತ್ರ