ಜುಡ್ವಾ-2 ಶೂಟಿಂಗ್ ಇದೇ ವರ್ಷದಿಂದ ಶೂಟಿಂಗ್ ನಡೆಯಲಿದೆ. ಇದಕ್ಕಾಗಿ ವರುಣ್ ಧವನ್ ತಯಾರಾಗಿದ್ದಾರೆ. ಅಂದಹಾಗೆ ಜುಡ್ವಾ ಚಿತ್ರ 1997ರಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ಸಲ್ಮಾನ್ ನಟಿಸಿದ್ದರು.. ಈ ಚಿತ್ರ ಬ್ಯ್ಲಾಕ್ ಬಾಸ್ಟರ್ ಚಿತ್ರಗಳಲ್ಲಿ ಒಂದಾಗಿತ್ತು..
ಆದ್ರೆ ಮತ್ತೆ ವರುಣ್ ಧವನ್ ಜುಡ್ವಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವರ್ಷ ಚಿತ್ರದ ಶೂಟಿಂಗ್ ಕೂಡ ನಡೆಯಲಿದೆ. ಇದಕ್ಕಾಗಿ ವರುಣ್ ಧವನ್ ಫುಲ್ ಉತ್ಸುಕರಾಗಿದ್ದಾರೆ. ಯಾಕಂದ್ರೆ ಸಲ್ಮಾನ್ ಖಾನ್ ಪಾತ್ರದಲ್ಲಿ ನಟಿಸಲು ಅವರಿಗೆ ಜವಾಬ್ದಾರಿ ಮೂಡಿದೆಯಂತೆ..
ಸಲ್ಮಾನ್ ಅಭಿನಯದ ಜುಡ್ವಾ ಚಿತ್ರದಲ್ಲಿ ಕರಿಷ್ಮಾ ಕಪೂರ್ ಹಾಗೂ ರಂಭಾ ಕಾಣಿಸಿಕೊಂಡಿದ್ದರು. ಆದ್ರೆ ಜುಡ್ವಾ -2 ಚಿತ್ರಕ್ಕೆ ಇದುವರೆಗೂ ಹಿರೋಯಿನ್ ಫೈನಲ್ ಆಗಿಲ್ವಂತೆ.. ಆದ್ರೆ ಶ್ರೀಲಂಕಾ ಬ್ಯೂಟಿ ಜಾಕ್ವೆಲಿನ್ ಫರ್ನಾಡಿಂಸ್ ಅವರನ್ನು ಈ ಚಿತ್ರಕ್ಕಾಗಿ ಸಂಪರ್ಕಿಸಲಾಗಿದೆಯಂತೆ. ಆದ್ರೆ ಜಾಕ್ವೆಲಿನ್ ಧವನ್ ಅಭಿನಯದ ಡಿಶುಮ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.