Select Your Language

Notifications

webdunia
webdunia
webdunia
webdunia

ನನಗೆ ಕನ್ನಡ ಚೆನ್ನಾಗಿ ಬರುತ್ತೆ: ರಾಧಿಕಾ ಆಪ್ಟೆ

ನನಗೆ ಕನ್ನಡ ಚೆನ್ನಾಗಿ ಬರುತ್ತೆ: ರಾಧಿಕಾ ಆಪ್ಟೆ
ಬೆಂಗಳೂರು , ಬುಧವಾರ, 19 ಅಕ್ಟೋಬರ್ 2016 (16:51 IST)

ಬೆಂಗಳೂರು: ಬಹುಭಾಷಾ ನಟಿ ರಾಧಿಕಾ ಆಪ್ಟೆ ಕಾರ್ಯಕ್ರಮವೊಂದರ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ರು. ಸಿಂಪಲ್ ಲುಕ್, ಅದ್ಬುತ ಅಭಿನಯ ಈ ನಟಿಯ ಪ್ಲಸ್ ಪಾಯಿಂಟ್. ಯಾವುದೇ ಪಾತ್ರವಿರಲಿ, ಎಂತದೇ ಸಿಚುವೇಶನ್ ಇರಲಿ ನಿರ್ದೇಶಕನಿಗೆ ಬೇಕಾದ ನಟನೆಯನ್ನು ರಾಧಿಕಾ ಹಾಲು ಕುಡಿದಷ್ಟೆ ಸಲಿಸಾಗಿ ಮಾಡ್ತಾಳೆ.
 

ಅದ್ರಲ್ಲೂ ಇತ್ತೀಚಿಗಷ್ಟೆ ತೆರೆಕಂಡ ಅವರ ಪರ್ಚಡ್ ಚಿತ್ರ ವಿಮರ್ಶಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಕಬಾಲಿ ಚಿತ್ರದಲ್ಲಂತೂ ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಅಷ್ಟೆ ಅಲ್ಲದೇ ವಿದೇಶದಲ್ಲೂ ಭರ್ಜರಿ ಹವಾ ಕ್ರಿಯೇಟ್ ಮಾಡಿ ಎಲ್ಲರ ಮನಗೆದ್ದಿತ್ತು. ಕಬಾಲಿ ಚಿತ್ರದ ಬಗ್ಗೆ ಮಾತನಾಡಿ, ಸಿನಿ ದುನಿಯಾದ ಸೂಪರ್ಸ್ಟಾರ್ ರಜನಿಕಾಂತ್ ಸರ್ ಜೊತೆ ನಟಿಸಿದ್ದು, ಜೀವನದಲ್ಲಿ ಮರೆಯಲಾರದ ಸುಸಂದರ್ಭಎಂದರು.
 

ಕೇವಲ ಬಾಲಿವುಡ್ನಲ್ಲಷ್ಟೆ ಅಲ್ಲದೇ ಕಾಲಿವುಡ್, ಟಾಲಿವುಡ್ ನಲ್ಲಿ ಸೆನ್ಸೆಷನಲ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಇಷ್ಟೆಲ್ಲಾ ಪ್ರತಿಭೆ ಇರೋ ನಟಿ ಬೆಂಗಳೂರಿಗೆ ಆಗಮಿಸಿ, ಸಿಲಿಕಾನ್ ಸಿಟಿ ನನ್ನ ಹಾಟ್ ಫೆವರಿಟ್, ಅಂದಿದ್ಲೂ. ಅದ್ರಲ್ಲೂ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ರಾಧಿಕಾ ಸಖತ್ತಾಗೆ ಆನ್ಸರ್ ಮಾಡಿದ್ರು. ಒಂದು ಹೆಜ್ಜೆ ಮುಂದೆ ಹೋಗಿ ನನಗೆ ಕನ್ನಡ ಚನ್ನಾಗಿ ಬರುತ್ತೆ ಅಂದ್ರು.

ನಂತ್ರ ಅಭಿಮಾನಿಯೊಬ್ಬ ಕನ್ನಡ ಚಿತ್ರ ಮಾಡೋದ್ಯಾವಾಗ ಅಂದಾಗ, ಸದ್ಯಕ್ಕೆ ಸ್ಯಾಂಡಲ್ ವುಡ್ ಗೆ ಬರುವ ಯೋಜನೆಗಳಿಲ್ಲ. ಬೇರೆ ಕೆಲ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವುದರಿಂದ ಅವುಗಳತ್ತ ಗಮನ ಹರಸಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶಗಳು ಸಿಕ್ಕರೆ  ಖಂಡಿತ ಆಗಮಿಸುತ್ತೆನೆ ಅಂದ್ರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮಗಳಿಗೆ ಯಶ್ ಸವಾಲು