ಮುಂಬೈ: ರಿಲಯನ್ಸ್ ಉದ್ಯಮಿ ಅನಂತ್ ಅಂಬಾನಿ ಗೆಳತಿ ರಾಧಿಕಾ ಮರ್ಚೆಂಟ್ ಭಿಕ್ಷುಕಿಯೊಬ್ಬಳ ಜತೆ ನಡೆದುಕೊಂಡ ರೀತಿಗೆ ಟ್ವಿಟರಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ.
ತಮ್ಮ ಗೆಳತಿಯರ ಜತೆ ಲಂಚ್ ಡೇಟ್ ಗೆ ಹೋಗಿದ್ದ ರಾಧಿಕಾ ಹೊರಗೆ ಬರುವಾಗ ಬಳಿ ಬಂದ ವೃದ್ಧ ಭಿಕ್ಷುಕಿಗೆ ತಮ್ಮ ಪರ್ಸ್ ನಿಂದ ದುಡ್ಡು ಕೊಟ್ಟು ಸಹಾಯ ಮಾಡಿದ್ದಾರೆ.
ಇನ್ನೇನು ಕಾರು ಹತ್ತಿದ್ದ ರಾಧಿಕಾ ವೃದ್ಧೆಯನ್ನು ನೋಡಿ ಕೆಳಗಿಳಿದು ಬಂದು ಹಣ ಸಹಾಯ ಮಾಡಿದ್ದು ನೋಡಿ ಖುಷಿಯಾದ ವೃದ್ಧೆ ರಾಧಿಕಾರನ್ನು ಆಶೀರ್ವದಿಸಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ರಾಧಿಕಾ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ