Select Your Language

Notifications

webdunia
webdunia
webdunia
webdunia

’ಬಾಹುಬಲಿ 2’ ಮೊದಲು ವೀಕ್ಷಿಸಲಿರುವ ಬ್ರಿಟನ್ ರಾಣಿ

’ಬಾಹುಬಲಿ 2’ ಮೊದಲು ವೀಕ್ಷಿಸಲಿರುವ ಬ್ರಿಟನ್ ರಾಣಿ
Mumbai , ಗುರುವಾರ, 2 ಮಾರ್ಚ್ 2017 (12:29 IST)
ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಆಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ಅದ್ದೂರಿ ಚಿತ್ರ ಬಾಹುಬಲಿ 2. ಈಗಾಗಲೆ ಈ ಚಿತ್ರ ಅಪಾರ ನಿರೀಕ್ಷೆ, ಕುತೂಹಲವನ್ನು ಕೆರಳಿಸಿದೆ. ಸಿನಿಮಾಸಕ್ತರು ಚಿತ್ರವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. 
 
ಈ ಚಿತ್ರದ ಪ್ರೀಮಿಯಂ ಶೋವನ್ನು ಮೊದಲು ವೀಕ್ಷಿಸಲಿದ್ದಾರೆ ರಾಣಿ ಎಲಿಜಬೆತ್-2. ಸ್ವತಂತ್ರ್ಯ ಭಾರತ 70 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಏಪ್ರಿಲ್ 24ರಂದು ಬ್ರಿಟಿಷ್ ಫಿಲ್ಮ್ ಇನ್ಸ್‌ಟಿಟ್ಯೂಟ್ ’ಇಂಡಿಯಾ ಆನ್ ಫಿಲ್ಮ್’ ಕಾರ್ಯಕ್ರಮದಲ್ಲಿ ಕೆಲವು ಭಾರತದ ಸಿನಿಮಾಗಳನ್ನು ಪ್ರದರ್ಶಿಸಲಿದೆ. 
 
ಇದರಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ: ದಿ ಕನ್‍ಕ್ಲೂಜನ್ ಸಹ ಪ್ರದರ್ಶನ ಕಾಣಲಿದೆ. ಈ ಪ್ರದರ್ಶನಕ್ಕೆ ರಾಣಿ ಎಲಿಜಬೆತ್-2, ಪ್ರಧಾನಿ ನರೇಂದ್ರ ಮೋದಿ ಹಾಜರಾಗಲಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಮಾತ್ರ ಹೊರಬಿದ್ದಿಲ್ಲ. 2015ರಲ್ಲಿ ಬಿಡುಗಡೆಯಾದ ಬಾಹುಬಲಿ: ದಿ ಬಿಗಿನಿಂಗ್ ಚಿತ್ರ ಜಗತ್ತಿನಾದ್ಯಂತ ಅತ್ಯದ್ಭುತ ಕಲೆಕ್ಷನ್ ಮಾಡಿದ್ದು ಗೊತ್ತೇ ಇದೆ.
 
ಆ ಚಿತ್ರ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಮುಖ್ಯಪಾತ್ರಗಳಲ್ಲಿ ಅಭಿನಯಿಸಿರುವ ಚಿತ್ರ. ಈ ಚಿತ್ರಕ್ಕೆ ಅತ್ಯುತ್ತಮ ರಾಷ್ಟ್ರೀಯ ಪ್ರಶಸ್ತಿಗೂ ಭಾಜನವಾಗಿದೆ. ಇದರ ಮುಂದುವರೆದ ಭಾಗವಾಗಿ ’ಬಾಹುಬಲಿ: ದಿ ಕನ್‌ಕ್ಲೂಜನ್’ ಚಿತ್ರ ಏಪ್ರಿಲ್ 28ಕ್ಕೆ ತೆರೆಕಾಣುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಲರ್ಸ್ ಕನ್ನಡ ಮತ್ತು ಸೂಪರ್ ಚಾನೆಲ್‍ಗಳಲ್ಲಿ "ಬಿಗ್‍ಬಾಸ್ ಸಂತೆ"