Select Your Language

Notifications

webdunia
webdunia
webdunia
webdunia

ಕಲರ್ಸ್ ಕನ್ನಡ ಮತ್ತು ಸೂಪರ್ ಚಾನೆಲ್‍ಗಳಲ್ಲಿ "ಬಿಗ್‍ಬಾಸ್ ಸಂತೆ"

ಕಲರ್ಸ್ ಕನ್ನಡ ಮತ್ತು ಸೂಪರ್ ಚಾನೆಲ್‍ಗಳಲ್ಲಿ
Bangalore , ಗುರುವಾರ, 2 ಮಾರ್ಚ್ 2017 (12:13 IST)
ಕಲರ್ಸ್ ಕನ್ನಡ ಚಾನೆಲ್‍ನಲ್ಲಿ ಬಿಗ್‍ಬಾಸ್ ಸೀಸನ್ 4 ಮುಗಿದಿರಬಹುದು, ಆದರೆ ಅದರ ಬಗ್ಗೆ ಕುತೂಹಲ ಇನ್ನೂ ಮುಗಿದಿಲ್ಲ. ಈಚೆಗೆ ಮೈಸೂರಿನಲ್ಲಿ ನಡೆದ "ಬಿಗ್‍ಬಾಸ್ ಸಂತೆ" ಇದಕ್ಕೆ ಒಂದು ಅತ್ಯತ್ತಮ ಉದಾಹರಣೆ. ಹಾಗೆ ನೋಡಿದರೆ ಈ ಬಾರಿಯ ಬಿಗ್‍ಬಾಸ್ ವಿಶೇಷಗಳ ಸರಮಾಲೆಯನ್ನೇ ಹೊತ್ತು ತಂದಿದೆ.
 
ಒಬ್ಬ ಸಾಮಾನ್ಯ ವ್ಯಕ್ತಿ ಬಿಗ್‍ಬಾಸ್ ಮನೆಗೆ ಪ್ರವೇಶ ಪಡೆಯುವುದರಿಂದ ಆರಂಭವಾಗಿ ಆ ಸಾಮಾನ್ಯ ಮನುಷ್ಯ ಇತರ ಸೆಲೆಬ್ರೆಟಿಗಳನ್ನು ಸೋಲಿಸಿ ಪ್ರಶಸ್ತಿ ತನ್ನ ಮುಡಿಗೇರಿಸಿಕೊಳ್ಳುವವರೆಗೂ ಬಿಗ್‍ಬಾಸ್ ಸೀಸನ್ 4 ಒಂದು ರೀತಿಯ ದಾಖಲೆ ಬರೆದಿದೆ ಅನ್ನಬಹುದು. ಮೊಟ್ಟ ಮೊದಲ ಬಾರಿಗೆ ಬಿಗ್‍ಬಾಸ್ ಕಾರ್ಯಕ್ರಮ ನೂರು ದಿನಗಳ ಬದಲಿಗೆ 114 ದಿನಗಳ ಕಾಲ ನಡೆದಿರುವುದು ಕೂಡಾ ಈ ಬಾರಿಯೇ. 
 
ಈ ಸೀಸನ್‍ನ ಗ್ರ್ಯಾಂಡ್ ಫಿನಾಲೆ ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ಹಾಗೂ ಕಲರ್ಸ್ ಕನ್ನಡ ಎಚ್‍ಡಿ ಚಾನೆಲ್‍ಗಳಲ್ಲಿ ಏಕಕಾಲಕ್ಕೆ ಪ್ರಸಾರವಾಯಿತು. ಇದೂ ಒಂದು ಹೆಗ್ಗಳಿಕೆಯೇ. ಇವೆಲ್ಲದರ ಜೊತೆಗೆ ಈ ಬಾರಿ "ಬಿಗ್‍ಬಾಸ್ ಸಂತೆ" ಕೂಡಾ ನಡೆಯಿತು.
 
ಬಿಗ್‍ಬಾಸ್ ಎಂದರೆ ಸಂತೆಯಿಂದ ಸ್ವಲ್ಪ ದೂರವಿರುವ ರಿಯಾಲಿಟಿ ಶೋ.  ದೈನಂದಿನ ಬದುಕಿನ ಜಂಜಾಟಗಳಿಂದ ದೂರ ಹೋಗಿ ಸ್ಪರ್ಧಿಗಳು ತಮ್ಮನ್ನು ತಾವೇ ಕಂಡುಕೊಳ್ಳುವ ಕಾರ್ಯಕ್ರಮ ಇದು. ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಒಂದು ಮನೆಯೊಳಗೆ ನೂರಕ್ಕೂಹೆಚ್ಚು ದಿನ ಇದ್ದ ಆಟಗಾರರನ್ನು ಮತ್ತೆ ಜನಜಂಗುಳಿಗೆ ಕರೆದುಕೊಂಡು ಹೋಗುವ 
ಕೆಲಸವನ್ನು ಕಲರ್ಸ್ ಕನ್ನಡ ಮಾಡಿತು. 
 
ಅದುವೇ "ಬಿಗ್‍ಬಾಸ್ ಸಂತೆ." ಈ ಕಾರ್ಯಕ್ರಮ ನಡೆದಿದ್ದು ಅರಮನೆ ನಗರ ಮೈಸೂರಿನಲ್ಲಿ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರೊಂದಿಗೆ ಮಾತುಕತೆ, ಹಾಡು, ಹರಟೆ, ಡಾನ್ಸ್ ಮುಂತಾದ ಚಟುವಟಿಕೆಗಳಿಂದ ಸಾರ್ವಜನಿಕರನ್ನು ರಂಜಿಸಿ ಅವರ ನಾಡಿಮಿಡಿತ ಅರಿಯುವ ಪ್ರಯತ್ನವೇ "ಬಿಗ್‍ಬಾಸ್ ಸಂತೆ." ಬಿಗ್‍ಬಾಸ್ ಸಂತೆ ಕಾರ್ಯಕ್ರಮ ಮಾರ್ಚ್ 5 ರಂದು ಕಲರ್ಸ್ ಕನ್ನಡ ಹಾಗೂ ಸೂಪರ್‍ನಲ್ಲಿ ಸಂಜೆ 4 ಗಂಟೆಗೆ ಪ್ರಸಾರವಾಗಲಿದೆ.
 
ಮೈಸೂರಿನಲ್ಲಿ ನಡೆದ ಬಿಗ್‍ಬಾಸ್ ಸಂತೆಯಲ್ಲಿ ಪ್ರಥಮ್, ರೇಖಾ, ಓಂ ಪ್ರಕಾಶ್ ರಾವ್, ನಿರಂಜನ್ ದೇಶಪಾಂಡೆ, ಶೀತಲ್ ಶೆಟ್ಟಿ, ಮೋಹನ್, ಕಾರುಣ್ಯ ರಾಮ್, ಭುವನ್, ಸಂಜನಾ, ದೊಡ್ಡ ಗಣೇಶ್, ವಾಣಿಶ್ರೀ, ಚೈತ್ರಾ, ಶಾಲಿನಿ, ಮಸ್ತಾನ್ ಮತ್ತಿತರರು ಭಾಗವಹಿಸಿದ್ದರು. ಇಷ್ಟೇ ಅಲ್ಲದೇ ಬಹಳ ದಿನಗಳ ನಂತರ ಅಕುಲ್ ಬಾಲಾಜಿ ಕಲರ್ಸ್ ಕನ್ನಡಕ್ಕೆ ಮರಳಿ ಬಂದಿದ್ದಾರೆ. ಈ ಕಾರ್ಯಕ್ರಮವನ್ನು ಅಕುಲ್ ಬಾಲಾಜಿ ಎಂದಿನಂತೆ ಲವಲವಿಕೆಯಿಂದ ನಿರೂಪಿಸಿದ್ದಾರೆ. 
 
ಮೈಸೂರಿನ "ಒಳ್ಳೆ ಹುಡುಗ" ಲಾರ್ಡ್ ಪ್ರಥಮ್‌ಗೆ ನೆರೆದ ಜನತೆ ಜಯಘೋಷ ಹಾಕಿದ್ದಾರೆ. ಪ್ರೇಕ್ಷಕರಿಗೆ ತಮ್ಮ ಪ್ರೀತಿಯ ಸ್ಪರ್ಧಿಗಳನ್ನು ನೇರವಾಗಿ ನೋಡಿದ, ಮಾತನಾಡಿದ ತೃಪ್ತಿ ಒಂದೆಡೆಯಾದರೆ ಸ್ಪರ್ಧಿಗಳಿಗೆ ತಮ್ಮ ನೆಚ್ಚಿನ ಅಭಿಮಾನಿಗಳ ಜೊತೆ ಬೆರೆತ ತೃಪ್ತಿ ಮತ್ತೊಂದೆಡೆ. ಬಿಗ್‍ಬಾಸ್ ಸಂತೆ ಸಾರ್ಥಕತೆಯ ಭಾವನೆಗೆ ಸಾಕ್ಷಿಯಾಗಿತ್ತು. 
 
ಕಲರ್ಸ್ ಕನ್ನಡ ವಾಹಿನಿಯ ನಾನ್‍ಫಿಕ್ಷನ್‍ಹೆಡ್ ಜಯದೇವ್ ಶ್ರೀನಿವಾಸ್ ಹೇಳುವಂತೆ, "ಎಲ್ಲಾ ಸಂತೆಗಳಂತೆ ಅಲ್ಲ ಬಿಗ್‍ಬಾಸ್ ಸಂತೆ. ಹೆಸರಿಗೆ ತಕ್ಕಂತೆ ಬಿಗ್ ಫನ್, ಬಿಗ್ ಮಜಾ ಇರೋ ಸಂತೆ ಇದು. ಬಿಗ್‍ಬಾಸ್‍ನ ಪ್ರತಿಯೊಬ್ಬ ಸ್ಪರ್ಧಿ ವೇದಿಕೆ ಮೇಲೆ ಬಂದು ಅವರ ಬಿಗ್‍ಬಾಸ್ ಅನುಭವ ಹಂಚಿಕೊಂಡಿದ್ದಾರೆ. 
 
ಅವರಿಗೆ ವೀಕ್ಷಕರ ಜೊತೆಗೆ ಮಾತನಾಡುವ ಅವಕಾಶ ಸಿಕ್ಕಿದೆ. ಮೈಸೂರಿನ ಜನರು ತುಂಬಾ ಖುಷಿಪಟ್ಟರು. ಅವರನ್ನು ನೋಡಿ ನಾವೂ ಅಷ್ಟೇ ಖುಷಿ ಪಟ್ಟಿದ್ದೇವೆ." ಬಿಗ್‍ಬಾಸ್ ಸಂತೆಯ ರೋಮಾಂಚನ ಕ್ಷಣಗಳನ್ನು ನೋಡಲು ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ಚಾನೆಲ್‍ನ್ನು ಮಾರ್ಚ್ 5 ರಂದು ಸಂಜೆ 4 ಗಂಟೆಗೆ ತಪ್ಪದೇ ಟ್ಯೂನ್ ಮಾಡಿ.      

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತಾಬ್ ಬಚ್ಚನ್ ಉಯಿಲು ಬಯಲು!