Webdunia - Bharat's app for daily news and videos

Install App

ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದರೇ ಶ್ರೀದೇವಿ ಗಂಡ ಬೋನಿ ಕಪೂರ್

Krishnaveni K
ಭಾನುವಾರ, 31 ಮಾರ್ಚ್ 2024 (10:32 IST)
ಮುಂಬೈ: ಬಾಲಿವುಡ್ ನಟಿ ದಿವಂಗತ ಶ್ರೀದೇವಿ ಪತಿ, ನಿರ್ಮಾಪಕ ಬೋನಿ ಕಪೂರ್ ವಿರುದ್ಧ ಕೋಟ್ಯಾಂತರ ರೂಪಾಯಿ ಹಣಕಾಸಿನ ಅವ್ಯವಹಾರ ಆರೋಪ ಕೇಳಿಬಂದಿದೆ.

ಸಿನಿಮಾ ಚಿತ್ರೀಕರಣಕ್ಕಾಗಿ ಪ್ರಾಪರ್ಟಿ ಮಾರಾಟ ಮಾಡಿದ್ದ ಉದ್ಯಮಿಯೊಬ್ಬರು ಈ ಆರೋಪ ಮಾಡಿದ್ದಾರೆ. ತಮ್ಮಿಂದ ಚಿತ್ರೀಕರಣಕ್ಕೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹಣ ಕೊಡದೇ ವಂಚಿಸಿದ್ದಾರೆ ಎಂದು ಬೋನಿ ಕಪೂರ್ ವಿರುದ್ಧ ಉದ್ಯಮಿಯೊಬ್ಬರು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬೋನಿ ಕಪೂರ್ ‘ಆ ವ್ಯಕ್ತಿಗೆ ನಮ್ಮ ಸಂಸ್ಥೆಯಿಂದ 1.70 ಕೋಟಿ ರೂ. ಬಿಲ್ ನೀಡಬೇಕಿತ್ತು. ಸಿನಿಮಾ ಬಿಡುಗಡೆ ಮುನ್ನವೇ 1.07 ಕೋಟಿ ರೂ. ಪಾವತಿಸಿದ್ದೆವು. ಆತನಿಗೆ ಉಳಿದ ಹಣವನ್ನು ಸಿನಿಮಾ ಬಿಡುಗಡೆ ನಂತರ ಕೊಡುವುದಾಗಿ ಹೇಳಿದ್ದೆ. ಆಗ ಆತ ಒಪ್ಪಿಕೊಂಡು ಹೋಗಿದ್ದ. ಇದು ಚಿತ್ರರಂಗದಲ್ಲಿ ಅಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಒಂದೊಮ್ಮೆ ನಾನು ಮೋಸಗಾರ ಆಗಿದ್ದರೆ 50 ವರ್ಷದಿಂದ ಚಿತ್ರರಂಗದಲ್ಲಿ ಉಳಿಯುತ್ತಿದ್ದೆನೇ’ ಎಂದು ಬೋನಿ ಕಪೂರ್ ಪ್ರಶ್ನಿಸಿದ್ದಾರೆ.

ಈ ಹಿಂದೆ ನನ್ನ ಜೊತೆಗೆ ಕೆಲಸ ಮಾಡಿದ ಯಾರನ್ನೇ ಆದರೂ ಕೇಳಿ ನೋಡಬಹುದು. ನಾನು ಯಾರಿಗಾದರೂ ತಡವಾಗಿ ಪೇಮೆಂಟ್ ಮಾಡಿದ್ದು ಅಥವಾ ಪೇಮೆಂಟ್ ಮಾಡದೇ ವಂಚಿಸಿದ್ದರೆ ಹೇಳಲಿ’ ಎಂದು ಬೋನಿ ಕಪೂರ್ ಸವಾಲು ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments