Publish Date: Tue, 26 Mar 2024 (11:42 IST)
Updated Date: Tue, 26 Mar 2024 (11:52 IST)
ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ಬಹುಕಾಲದ ಗೆಳೆಯ ಮಥಾಯಸ್ ಬೋ ಜೊತೆ ಸೀಕ್ರೆಟ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರಾ? ಹೀಗೊಂದು ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ತಾಪ್ಸಿ ತಮ್ಮ ಹಾಗೂ ಮಥಾಯ ಸಂಬಂಧವನ್ನು ಜಗಜ್ಜಾಹೀರು ಮಾಡಿದ್ದರು. ಸದ್ಯದಲ್ಲೇ ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದರು. ಆದರೆ ತಮ್ಮ ಮದುವೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಇಷ್ಟವಿಲ್ಲ ಎಂದಿದ್ದರು. ಹೀಗಾಗಿ ಅವರ ಮದುವೆ ಕಾರ್ಯಕ್ರಮ ಸರಳವಾಗಿಯೇ ನಡೆಯಲಿದೆ ಎನ್ನುವುದು ಪಕ್ಕಾ ಆಗಿತ್ತು.
ಈಗ ರಾಜಸ್ಥಾನ್ ನ ಉದಯಪುರದಲ್ಲಿ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಡಿದೆ. ತಾಪ್ಸಿ ಆಪ್ತರು ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಮದುವೆ ವಿಚಾರ ಬಯಲಾಗಿದೆ.
ತಾಪ್ಸಿ ಮತ್ತು ಬ್ಯಾಡ್ಮಿಂಟನ್ ಪಟು ಮಥಾಯಸ್ ಬೋ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ. ಇತ್ತೀಚೆಗಷ್ಟೇ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಇದೀಗ ಮದುವೆಗೆ ಇಬ್ಬರ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದಾರೆ ಎನ್ನಲಾಗಿದೆ.