Select Your Language

Notifications

webdunia
webdunia
webdunia
webdunia

ಪ್ರಿಯಾಂಕ ಚೋಪ್ರಾ ಸದ್ದಿಲ್ಲದೆ ನಿಕ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ್ರಾ? ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ

ಪ್ರಿಯಾಂಕ ಚೋಪ್ರಾ ಸದ್ದಿಲ್ಲದೆ ನಿಕ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ್ರಾ? ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ
ಮುಂಬೈ , ಶುಕ್ರವಾರ, 29 ಜೂನ್ 2018 (07:02 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಹಾಲಿವುಡ್ ಸಿಂಗರ್ ನಿಕ್ ಜಾನ್ ಅವರ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಈಗಾಗಲೇ ಸಾಕಷ್ಟು ಬಾರಿ ಕೇಳಿಬಂದಿತ್ತು. ಆದರೆ ಇದೀಗ ಅವರಿಬ್ಬರು ಸದ್ದಿಲ್ಲದೇ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


ನಟಿ ಪ್ರಿಯಾಂಕ ಚೋಪ್ರಾ ಅವರು ಇಷ್ಟು ದಿನ ಹೊರ ದೇಶದಲ್ಲಿಯೇ ನಿಕ್ ಜೊತೆ ಸುತ್ತಾಡುತ್ತಿದ್ದರು. ಆದರೆ ಈಗ ನಿಕ್ ಅವರನ್ನು ಭಾರತಕ್ಕೆ ಕರೆತಂದು ಇಲ್ಲೂ ಕೂಡ ಸಮಾರಂಭಗಳಲ್ಲಿ ಕೈಕೈ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಈ ಕಾರಣದಿಂದ ಅವರು ನಿಕ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.


ಆದರೆ ಈಗ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಏನಪ್ಪ ಎಂದರೆ, ಒಂದೇ ರಿಂಗ್ ನಿಕ್ ಮತ್ತು ಪ್ರಿಯಾಂಕಾ ಬೆರಳುಗಳಲ್ಲಿ ಕಾಣಿಸಿಕೊಂಡಿರುವುದು. ಒಂದೇ ದಿನ ಬೆಳಿಗ್ಗೆ ನಿಕ್ ಕೈ ಬೆರಳಲ್ಲಿ ಇದ್ದ ಉಂಗುರ ಮಧ್ಯಾಹ್ನದ ವೇಳೆಗೆ ಪ್ರಿಯಾಂಕಾ ಬೆರಳನ್ನು ಅಲಂಕರಿಸಿದೆ. ಇದರಿಂದ ಇಬ್ಬರೂ ಅನ್‌ಅಫೀಶಿಯಲ್ ಆಗಿ ಎಂಗೇಜ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದದಲ್ಲಿ ಸುಳಿಯಲ್ಲಿ ಸಿಲುಕಿಕೊಂಡಿದೆ 'ಸಂಜು' ಸಿನಿಮಾ