ಹೈದರಾಬಾದ್ : ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಅವರು ನಟಿಸಿರುವ ‘ಭರತ್ ಅನೇ ನೇನು’ ಚಿತ್ರದ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ದಾಖಲೆಯೊಂದನ್ನೇ ಸೃಷ್ಠಿಸಿದೆ.
ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಟೀಸರ್ ಬಿಡುಗಡೆಯಾಗಿ 24 ಗಂಟೆ ಆಗುವಷ್ಟರಲ್ಲೇ 11.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 18 ಗಂಟೆಗಳಲ್ಲಿ 1 ಕೋಟಿ ಡಿಜಿಟಲ್ ವ್ಯೂ ಸಿಕ್ಕಿದೆ. ಯೂಟ್ಯೂಬ್‌ನಲ್ಲಿ 7 ಮಿಲಿಯನ್ ಜನ ಹಾಗೂ ಫೇಸ್‌ಬುಕ್‌ನಲ್ಲಿ 3 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಆದ್ದರಿಂದ ಇದು ಟೀಸರ್ ರಿಲೀಸ್ ಆಗಿ 24 ಗಂಟೆಗಳಲ್ಲಿ ಇತರ ತೆಲುಗು ಸಿನಿಮಾದ ಟೀಸರ್‌ಗಳಿಗಿಂತ ಹೆಚ್ಚು ನೋಡಲ್ಪಟ್ಟ ಸಿನಿಮಾ ಟೀಸರ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಈ ಚಿತ್ರದಲ್ಲಿ ಮಹೇಶ್ ಬಾಬು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಭರತ್ ರಾಮ್ ಎಂಬ ಯುವಕನ ಪಾತ್ರ ಮಾಡುತ್ತಿದ್ದು, ಆತ ಮುಂದೆ ತನ್ನ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾನೆ ಎಂಬುದು ಚಿತ್ರದ ಕಥೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ