ಕನ್ನಡ ಸಿನಿಮಾರಂಗದಲ್ಲಿ ಇದೀಗ ಹೊಸ ಹೊಸ ಪ್ರಯೋಗಗಳು ಆಗ್ತಾನೆ ಇವೆ. ಅದರಲ್ಲೂ ಹೊಸಬರ ಸಿನಿಮಾಗಳಲ್ಲಿ ಹೊಸ ಹೊಸ ಪ್ರಯೋಗಗಲು ಇದೀಗ ಮಾಮೂಲಾಗಿ ಬಿಟ್ಟಿದೆ. ಇದೀಗ ಅಂತಹದ್ದೇ ಹೊಸ ಪ್ರಯತ್ನವೊಂದಕ್ಕೆ ಸಾಕ್ಷಿಯಾಗಿದೆ ಕನ್ನಡದ ಮಕ್ಕಳ ಸಿನಿಮಾವೊಂದು. ಈ ಸಿನಿಮಾದ ಒಂದೇ ಹಾಡನ್ನು ಏಳು ಜನ ಗಾಯಕಿಯರು ಹಾಡಿದ್ದಾರೆ.
ಅಂದ್ಹಾಗೆ ಆ ಸಿನಿಮಾದ ಹೆಸರು ಫಲಿತಾಂಶ.ನಾವು ಇದುವೆರೆಗೂ ಒಂದೇ ಹಾಡನ್ನು ಅನೇಕ ಗಾಯಕಿಯರು ಹಾಡಿರೋದನ್ನು ನೋಡಿರುತ್ತೇವೆ. ಇಲ್ಲಾ ಒಂದು ಹಾಡಿನಲ್ಲಿ ಗಾಯಕ ಅಥವಾ ಗಾಯಕಿ ಅಭಿನಯಿಸಿರೋದನ್ನು ನೋಡಿರುತ್ತವೆ.
ಆದ್ರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ತಯಾರಾಗುತ್ತಿರುವ ಫಲಿತಾಂಶ ಅನ್ನೋ ಸಿನಿಮಾದಲ್ಲಿ ಒಂದೇ ಹಾಡಿನಲ್ಲಿ ಕನ್ನಡ ಏಳು ಗಾಯಕಿಯರು ಅಭಿನಯಿಸಿದ್ದಾರೆ.ಬಿ.ಕೆ ಸುಮಿತ್ರ,ಮಾನಸ ಹೊಳ್ಳ,ಇಂದು ವಿಶ್ವನಾಥ್,ಪ್ರಾರ್ಥನಾ,ಸುರೇಖಾ, ಸಿತಾರ್ ಸುಬ್ರಮಣಿ, ರಮಾ ಅರವಿಂದ್ ಹೀಗೆ ಏಳು ಜನ ಗಾಯಕಿಯರು ಫಲಿತಾಂಶ ಸಿನಿಮಾದ ಒಂದೇ ಹಾಡಿನಲ್ಲಿ ಅಭಿನಯಿಸಿದ್ದಾರೆ.
ಫಲಿತಾಂಶ ಸಿನಿಮಾ ಮಕ್ಕಲ ಕುರಿತಾದ ಸಿನಿಮಾ. ಈ ಸಿನಿಮಾ ಇಂದಿನ ಮಕ್ಕಳ ಪೋಷಕರಿಗೆ ಉತ್ತಮವಾದ ಸಂದೇಶಗಳನ್ನು ನೀಡುತ್ತಂತೆ. ಸಿನಿಮಾವನ್ನು ಎಂ.ಆರ್ ಕಪಿಲ್ ಅನ್ನೋ ನವ ನಿರ್ದೇಶಕ ನಿರ್ದೇಶನ ಮಾಡುತ್ತಿದ್ದಾರೆ. ಇಂದಿನ ಪರೀಕ್ಷೆಗಳ ಫಲಿತಾಂಶಗಳು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅಂತಾ ಸಿನಿಮಾದಲ್ಲಿ ಹೇಳಲಾಗಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ