Select Your Language

Notifications

webdunia
webdunia
webdunia
webdunia

ಕಲಿ ಸಿನಿಮಾದ ಬಗ್ಗೆ ನಿರ್ದೇಶಕ ಪ್ರೇಮ್ ಹೇಳಿದ್ದೇನು?

ಕಲಿ ಸಿನಿಮಾ
ಮುಂಬೈ , ಶುಕ್ರವಾರ, 3 ಜೂನ್ 2016 (10:07 IST)
ಕನ್ನಡದಲ್ಲಿ ನಟ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರು ಜೊತೆಯಾಗಿ ಅಭಿನಯಿಸುತ್ತಿರುವ  ಮಲ್ಟಿ ಸ್ಟಾರ್ ಸಿನಿಮಾ ಕಲಿ. ಅದ್ಧೂರಿಯಾಗಿ ಸಿನಿಮಾ ಟೈಟಲ್ ಲಾಂಚ್ ಮಾಡಿದ್ದ ಸಿನಿಮಾ ತಂಡ ಆಮೇಲೆ ಕೊಂಚ ಸೈಲೆಂಟ್ ಆಗಿತ್ತು. ಹೀಗಿರುವಾಗಲೇ ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು.ಅದಕ್ಕೆ ಇದೀಗ ನಿರ್ದೇಶಕ ಪ್ರೇಮ್ ಅವರು ಉತ್ತರ ನೀಡಿದ್ದಾರೆ.
   
ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು ಅನ್ನೋ ಗಾಸಿಪ್ ಗಳಿಗೆ ಉತ್ತರ ನೀಡಿರುವ ಪ್ರೇಮ್, ಮೊದಲಿನಿಂದಲೂ ಸಿನಿಮಾದ ಬಗ್ಗೆ  ಗಾಂಧಿನಗರದಲ್ಲಿ ಹಲವು ಸುದ್ದಿಗಳು ಕೇಳಿ ಬರುತ್ತಲೇ ಇವೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸದ್ಯಕ್ಕಂತೂ `ಕಲಿ' ಪ್ರಿಪ್ರೋಡಕ್ಷನ್ ಹಂತದಲ್ಲಿದೆ ಅಂದಿದ್ದಾರೆ.

ಅಲ್ಲದೇ ನಾನು ಕಲಿ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನೀಗ ಚಿತ್ರದ ಬಗ್ಗೆ ಹಬ್ಬುವ ನೆಗೆಟಿವ್ ಸುದ್ದಿಗಳಿಗೆ ತಲೆಕೆಡಿಸಿಕೊಂಡರೆ ಕೆಲಸ ಸಾಗೋದಿಲ್ಲ, 'ಕಲಿ' ಸಿನಿಮಾ ಆಗುವುದು ಪಕ್ಕಾ. 'ಕಲಿ' ಒಂದು ದೊಡ್ಡ ಸಿನಿಮಾ ಆದ್ದರಿಂದ ಇನ್ನೂ ತುಂಬಾ ಕೆಲಸಗಳಿವೆ  ಎಂದಿದ್ದಾರೆ.
 
  ಅಂದ್ಹಾಗೆ ಕಲಿ ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ. ಈಗಾಗಲೇ ಕನ್ನಡ ಹಾಗೂ ತಮಿಳು ಕಲಾವಿದರ ಡೇಟ್ಸ್ ಫೈನಲ್ ಆಗಿದೆ. ತೆಲುಗಿನ ಹೀರೋಗಳ ಡೇಟ್ಸ್ ಇನ್ನಷ್ಟೇ ಫೈನಲ್ ಆಗಬೇಕು. ಒಂದೇ ಸೆಟ್ನಾಲ್ಲಿ ಮೂರು ಭಾಷೆಯ ಚಿತ್ರೀಕರಣ ನಡೆಯಲಿದೆಯಂತೆ. ಹಾಗಾಗಿ ಶೀಘ್ರದಲ್ಲೇ ಸಿನಿಮಾದ ಶೂಟಿಂಗ್ ಆರಂಭವಾಗೋದು ಖಚಿತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯಾಗುತ್ತಿದ್ದಾರೆ ಕ್ರಿಕೆಟಿಗ ಹರ್ಭಜನ್ ಸಿಂಗ್