ಕೆಲವೇ ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಹರ್ಭಜನ್ ಸಿಂಗ್ ಹಾಗೂ ನಟಿ ಗೀತಾ ಬಾಸ್ರಾ ಜೋಡಿ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೋಡಿದ್ದಾರೆ. ಗೀತಾ ತಾಯಿಯಾಗುತ್ತಿದ್ದಾರೆ ಅನ್ನೋ ಸುದ್ದಿ ಇದೀಗ ಬಾಲಿವುಡ್ ಅಂಗಳ
ದಲ್ಲಿ ಕೇಳಿ ಬರುತ್ತಿದೆ.
ಬಹು ವರ್ಷಗಳಿಂದ ಪರಸ್ಪ ಪ್ರೀತಿಸುತ್ತಿದ್ದ ಹರ್ಭಜನ್ ಸಿಂಗ್ ಹಾಗೂ ಗೀತಾ ಬಾಸ್ರಾ ಅವರು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದ್ಧೂರಿಯಾಗಿ ನಡೆದ ಅವರ ವಿವಾಹ ಸಮಾರಂಭಕ್ಕೆ ಬಾಲಿವುಡ್ ತಾರೆಯರು ಹಾಗೂ ಅನೇಕ ಕ್ರಿಕೆಟಿಗರು ಸಾಕ್ಷಿಯಾಗಿದ್ದರು. ಇದೀಗ ಗೀತಾ ತಾಯಿಯಾಗುತ್ತಿದ್ದಾರೆ ಅನ್ನೋ ಸಂತಸದ ಸುದ್ದಿಯನ್ನು ನೀಡಿದ್ದಾರೆ.
ಇನ್ನು ತುಂಬಾ ಖುಷಿಯಲ್ಲಿರುವ ಗೀತಾ ಬಾಸ್ರಾ ತಮ್ಮ ತಾಯಿ ಹಾಗೂ ಸಹೋದರಿಯೊಂದಿಗೆ ಇರುವ ಖುಷಿಯ ಕ್ಷಣಗಳನ್ನು ಇನ್ಸ್ ಟ್ರಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಇದು ನನ್ನ ಹಾಗೂ ಸಹೋದರಿಯ ಬಹು ದಿನಗಳ ನಂತರದ ಭೇಟಿ ಅಂತಾ ಅವರು ಹೇಳಿದ್ದಾರೆ.
ಇನ್ನು ಗೀತಾ ತಾಯಿಯಾಗುತ್ತಿರೋದು ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರಲ್ಲೂ ಸಂತಸವನ್ನು ಉಂಟು ಮಾಡಿದೆಯಂತೆ. ಇದೇ ತಿಂಗಳ 4 ರಂದು ಗೀತಾ ಅವರ ಸೀಮಂತ ಕಾರ್ಯಕ್ರಮ ನಡೆಯಲಿದೆಯಂತೆ. ಹಾಗಾಗಿ ಕುಟುಂಬದ ಮಂದಿ ಅದಕ್ಕಾಗಿ ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರಂತೆ.