'ರಾಯಿಸ್' ಚಿತ್ರದಲ್ಲಿ ಕೇವಲ ಶಾರೂಖ್ ಖಾನ್ ಅಷ್ಟೇ ಸ್ಟಾರ್ ಅಲ್ಲ... ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ನಟಿ ಸನ್ನಿ ಲಿಯೋನ್ ಕೂಡ ಮಿಂಚಿದ್ದಾರೆ. ಸನ್ನಿ ಲಿಯೋನ್ ಎಲ್ಲೆಡೆ ಅಪಾರ ಅಭಿಮಾನಿಗಳು ಇದ್ದಾರೆ. ಸನ್ನಿ ಲಿಯೋನ್ ಅಭಿನಯದ ರಾಯಿಸ್ ಚಿತ್ರ ಭಾರತದಲ್ಲಿ ಅಷ್ಟೇ ಅಲ್ಲ. ಪಾಕಿಸ್ತಾನದಲ್ಲೂ ತೆರೆ ಕಾಣಲಿದೆ. ಚಿತ್ರವನ್ನು ಪಾಕಿಸ್ತಾನಿಗರು ನೋಡಿ ಎಂಜಾಯ್ ಮಾಡಬಹುದಂತೆ.
ಪಾಕಿಸ್ತಾನದಲ್ಲಿ 'ರಾಯಿಸ್' ಚಿತ್ರವನ್ನು ವೀಕ್ಷಿಸುವ ಹಲವು ಅಭಿಮಾನಿಗಳು ಇದ್ದಾರೆ. ಅಲ್ಲಿ ಬಾಲಿವುಡ್ ಸಿನಿಮಾವನ್ನು ವೀಕ್ಷಿಸುವ ಹಲವಾರು ಪ್ರೇಕ್ಷಕರು ಇರುವುದರಿಂದ ಚಿತ್ರದ ನಿರ್ದೇಶಕರು ರಾಯಿಸ್ ಚಿತ್ರವನ್ನು ಪಾಕಿಸ್ತಾನದಲ್ಲೂ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.
ಇನ್ನೂ ಚಿತ್ರದಲ್ಲಿ ಸನ್ನಿ ಶಾರೂಖ್ ಖಾನ್ ಜತೆಗೆ ಐಟಂ ಸಾಂಗ್‌ನಲ್ಲಿ ಮಿಂಚಿದ್ದಾರೆ. ಕೆಲವೊಂದಿಷ್ಟು ಮಸಾಲವನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಲಿಯೋನ್ ಲೈಲಾ ಓ ಲೈಲಾ ಐಟಂ ಸಾಂಗ್‌ಗೆ ಶಾರೂಖ್ ಜತೆಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇನ್ನೂ ಚಿತ್ರ ಜನೆವರಿಗೆ ಬಿಡುಗಡೆಗೊಳ್ಳಲಿದೆ.
2016ರಲ್ಲಿ ಶಾರೂಖ್ ಖಾನ್ ಅವರ ರಾಯಿಸ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ. ಈ ಸಿನಿಮಾದ ಬಗ್ಗೆ ಹಲವರು ಮಾತಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅಷ್ಟೇ ರಾಯಿಸ್ ಚಿತ್ರದ ಫೋಟೊ ಹಾಗೂ ವಿಡಿಯೋವನ್ನು ಇನಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ