ಜಾನ್ ಅಬ್ರಾಹಂ ಒಬ್ಬ ಬಾಲಿವುಡ್ ಸ್ಟಾರ್ ಆಗಿರಬಹುದು. ಅಪಾರ ಅಭಿಮಾನಿಗಳನ್ನು ಹೊಂದಿರಬಹುದು. ಆದ್ರೆ ಜಾನ್ ಅಬ್ರಾಹಂ ಇಂದಿಗೂ ಮಧ್ಯಮ ವರ್ಗದ ಮೌಲ್ಯಗಳನ್ನು ನಂಬುತ್ತಾರಂತೆ. ಹೀಗಂತ ನಟ ಜಾನ್ ಅಬ್ರಾಹಂ ತಿಳಿಸಿದ್ದಾರೆ.
ನಟನ ಸಾಹಸ ದೃಶ್ಯಗಳ ಪ್ರದರ್ಶನವನ್ನು ಮಕ್ಕಳು ಕಾಪಿ ಮಾಡುತ್ತಾರೆ ಎಂಬುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಟ ಜಾನ್ ಅಬ್ರಾಹಂ, ಸ್ಕ್ರೀನ್ ಮೇಲೆ ನಾವು ಪಾತ್ರಕ್ಕೆ ತಕ್ಕಂತೆ ಅಭಿನಯ ಮಾಡುತ್ತೇವೆ. ಆದ್ರೆ ಮಕ್ಕಳು ಇದನ್ನು ಕಾಪಿ ಮಾಡಬಾರದು ಎಂದು ತಿಳಿಸಿದರು.
ಸೇಕ್ರೇಡ್ ಹೈ ಸ್ಕೂಲ್ ಆಯೋಜಿಸಿದ್ದ ಹ್ಯೂಮಾನಿಟಿ ಎನ್ನುವ ಎನ್‌ಜಿಓ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಾನ್, ತಮಿಳು ನಾಡು ಪ್ರವಾಹದಲ್ಲಿ ನಿವಾಸ ಕಳೆದುಕೊಡುವರ ಕುರಿತು ಸಹಾಯಕ್ಕೆ ಮುಂದಾಗಿರುವ ಸಂಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಚಿಕ್ಕಮಕ್ಕಳ ಜತೆಗೆ ನೇರವಾಗಿ ಮುಖಾ ಮುಖಿಯಾಗಿ ಭೇಟಿ ಮಾಡಿದ ವೇಳೆ ನನಗೆ ಸ್ಟಾರ್ ಅಂತ ಎನ್ನಿಸಲಿಲ್ಲ. ಮಾನವೀಯ ಗುಣದಿಂದ ಭೇಟಿ ಮಾಡುವುದು ಮುಖ್ಯವಾಗಿತ್ತು ಎಂದ ಜಾನ್ ಹೇಳಿದ್ದಾರೆ. ನಾನು ಈ ಶಾಲೆಗೆ ಭೇಟಿ ನೀಡಿ ಮಕ್ಕಳ ಜತೆ ಮಾತನಾಡಿದ್ದೇನೆ. ಇದು ನನಗೆ ಆಶ್ಚರ್ಯ ತಂದಿದೆ., ಸಾಮಾನ್ಯ ಮನುಷ್ಯನಂತೆ ನನ್ನ ಜತೆಗೆ ಮಕ್ಕಳು
ಮಾತನಾಡಿದ್ದು ನನಗೆ ಸಂತಸವಾಗಿದೆ.
ಆದ್ದರಿಂದ ನಾನು ಮಧ್ಯಮ ವರ್ಗದ ಮೌಲ್ಯಗಳನ್ನು ಇಷ್ಟಪಡುತ್ತೇನೆ. ನಾನೊಬ್ಬ ಮಧ್ಯಮ ವರ್ಗದವವನು... ನನ್ನ ಪೋಷಕರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಆದ ಕಾರಣ ಮೌಲ್ಯಗಳನ್ನು ಮರೆಯಬೇಡಿ ಎಂದು ಜಾನ್ ಅಬ್ರಾಹಂ ತಿಳಿಸಿದ್ದಾರೆ.
ಮಕ್ಕಳ ಜೀವನದಲ್ಲಿ ಮೂರು ಅಂಶಗಳ ಮಹತ್ವದ ಪಾತ್ರ ವಹಿಸಲಿವೆ. ಮಕ್ಕಳಿಗೆ ಶಿಕ್ಷಣ ನೀಡುವುದು ಉತ್ತಮ. ಲಂಚದ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು. ನಮ್ಮ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಭ್ರಷ್ಟಾಚಾರ ಕಡಿಮೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರು ಮುಂದಾಗಬೇಕು. ನಾವೆಲ್ಲರೂ ಸಮಾನರು, ಕೀಳು-ಮೇಲು ಎಂಬ ಮನೋಭಾವನೆಯನ್ನು ಬಿಟ್ಟುಬಿಡಬೇಕು. ಎಲ್ಲರನ್ನು ಗೌರವದಿಂದ ಕಾಣುವುದು ಉತ್ತಮ ಎಂದು ಇದೇ ವೇಳೆ ಜಾನ್ ಅಬ್ರಾಹಂ ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ