ಪ್ರಖ್ಯಾತಿಗೆ ಹೆಸರೇ ಅದು ಪ್ರಿಯಾಂಕಾ ಛೋಪ್ರಾ, ಬಾಲಿವುಡ್ ಇರಲಿ ಅಥವಾ ಹಾಲಿವುಡ್ ಇರಲಿ ಯಾವುದಕ್ಕೂ ಸೈ ಎನ್ನುವ ನಟಿಯರಲ್ಲಿ ಪ್ರಿಯಾಂಕಾ ವಿಭಿನ್ನ ಮನೋಭಾವದವರು. ಸದಾ ಪಾಸಿಟಿವ್ ಆಗಿರುವ ಪಿಗ್ಗಿಗೆ ಅಭಿನಯ, ನಟನೆ ಅಂದ್ರೆ ಅಷ್ಟೇ ಸಲೀಸು. ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್‌ಗಳಿಲ್ಲದೇ ನೆಲೆಯೂರಿದ ಹುಡುಗಿ. ಆದ್ದರಿಂದ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಂದು ಬೇ ವಾಚ್ ಬೆಡಗಿ ಪ್ರಿಯಾಂಕಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
2003ರಲ್ಲಿ ಬಾಲಿವುಡ್ ಎಂಟ್ರಿ ನೀಡಿದ್ದ ಪಿಗ್ಗಿ 'ದಿ ಲವ್ ಸ್ಟೋರಿ' ಚಿತ್ರದ ಮೂಲಕ ತೆರೆಯಲ್ಲಿ ಮಿಂಚಿದವರು. ಈ ಚಿತ್ರದಲ್ಲಿ ಸನ್ನಿ ಡಿಯೋಲ್‌ಗೆ ಜತೆಗೆ ಸ್ಕ್ರೀನ್ ಶೇರ್ ಮಾಡಿದ್ದರು.
ಆದ್ರೆ ಇಂದಿಗೂ ಪ್ರಿಯಾಂಕಾ ಬಾಲಿವುಡ್‌ನಲ್ಲಿ ಯಾವುದೇ ಗಾಡ್ ಫಾದರ್‌ಗಳಿಲ್ಲದೇ ಚಿತ್ರರಂಗದಲ್ಲಿ ನೆಲೆಯೂರಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.
ಸದಾ ಪಾಸಿಟಿವ್ ಆಗಿರುವ ಪಿಗ್ಗಿಗೆ ವಿಭಿನ್ನ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳನ್ನು ಫಾಲೋ ಮಾಡುತ್ತಾರಂತೆ. ಯಾವುದೇ ನ್ಯೂನತೆ ಇಲ್ಲದೇ ಮುಂದುವರಿಯುವ ಮನೋಭಾವದವರು ಪ್ರಿಯಾಂಕಾ.. ಬೇರೆಯೊಬ್ಬರಿಂದ ಕಲಿಯುತ್ತೇನೆ ಎನ್ನುತ್ತಾರೆ ಪ್ರಿಯಾಂಕಾ,
ನಾನೊಬ್ಬಳು ಅವಿವೇಕಿ, ಎಮೋಷನಲ್, ನಿಷ್ಠಾವಂತ ಹುಡುಗಿ ಎನ್ನುವ ಅವರು ತಾತ್ವಿಕ ಸಿದ್ಧಾಂತಗಳನ್ನು ನಂಬುವಂಥವರು. ನನ್ನ ಪೋಷಕರು ನನ್ನ ವೃತ್ತಿಗೆ ಪ್ರೋತ್ಸಾಹ ನೀಡಿದ್ದರು. ಏನು ಆಗಲು ಬಯಸುತ್ತೇನೆ ಅದೆಲ್ಲದಕ್ಕೂ ಸಂಪೋರ್ಟ್ ಮಾಡಿದ್ದರು. ಚಿಕ್ಕವಳಾಗಿದ್ದಾಗ ನಾನು ಎಂಜಿನಿಯರ್ ಆಗ್ಬೇಕು, ಮನೆಯಲ್ಲಿರ ಬೇಕು, ಇಲ್ಲವೇ ಪೈಲಟ್ ಆಗುವ ಕನಸು ಇತ್ತು. ಆದ್ರೆ ಆ್ಯಕ್ಟರ್ ಆಗುವ ಕನಸು ನನ್ನ ಲಿಸ್ಟ್‌ನಲ್ಲಿ ಇರಲಿಲ್ಲ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ