ಬೆಂಗಳೂರು: ಪಾಕ್ ನಟ ಫವಾದ್ ಖಾನ್ ಅವರು 9 ವರ್ಷಗಳ ನಂತರ ಅಬಿರ್ ಗುಲಾಲ್ ಚಿತ್ರದ ಮೂಲಕ ಬಾಲಿವುಡ್‌ಗೆ ಮರಳುತ್ತಿದ್ದಾರೆ. ಚಿತ್ರದ ಟೀಸರ್ ಮಂಗಳವಾರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಸ್ವಾಗತ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಇದೀಗ ಸಿನಿಮಾಗೆ ಎಂಎನ್‌ಎಸ್ ಮತ್ತು ಶಿವಸೇನೆಯ ರಾಜಕೀಯ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ.
ದೈನಿಕ್ ಭಾಸ್ಕರ್ ಜೊತೆಗಿನ ಸಂಭಾಷಣೆಯಲ್ಲಿ, ರಾಜಕಾರಣಿಗಳು ಫವಾದ್ ಅವರ ಬಾಲಿವುಡ್‌ಗೆ ಮರಳುವಿಕೆಯನ್ನು ಖಂಡಿಸಿದ್ದಾರೆ ಮತ್ತು ಮಹಾರಾಷ್ಟ್ರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಎಂಎನ್‌ಎಸ್ ನಾಯಕಿ ಅಮೇಯಾ ಖೋಪ್ಕರ್,ಈ ಚಿತ್ರವನ್ನು ಯಾವುದೇ ಸಂದರ್ಭದಲ್ಲೂ ಬಿಡುಗಡೆ ಮಾಡಲು ಬಿಡುವುದಿಲ್ಲ, ನಾವು ಚಿತ್ರದ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ನಮ್ಮ ವಿವರವಾದ ಹೇಳಿಕೆಯನ್ನು ನೀಡುತ್ತೇವೆ ಎಂದಿದ್ದಾರೆ
ಶಿವಸೇನಾ ನಾಯಕ ಸಂಜಯ್ ನಿರುಪಮ್ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, "ಪಾಕಿಸ್ತಾನದಿಂದ ಒಂದು ಚಿತ್ರ ಬಿಡುಗಡೆಯಾದಾಗ, ಭಾರತೀಯ ಜನರು ಅದನ್ನು ನೋಡಲು ಇಷ್ಟಪಡುವುದಿಲ್ಲ. ಒಂದು ಅಥವಾ ಎರಡು ಚಿತ್ರಗಳನ್ನು ಒಂದು ನಿಮಿಷ ನೋಡುವುದು ಬೇರೆ ವಿಷಯ, ಆದರೆ ಪಾಕಿಸ್ತಾನಿ ಕಲಾವಿದರ ಚಲನಚಿತ್ರಗಳು ಭಾರತೀಯ ಪ್ರೇಕ್ಷಕರಲ್ಲಿ ಹೆಚ್ಚು ಜನಪ್ರಿಯವಾಗುವುದಿಲ್ಲ. ಅದಕ್ಕಾಗಿಯೇ ಪಾಕಿಸ್ತಾನಿ ತಾರೆಯರು ಭಾರತದಲ್ಲಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಾಗಿಲ್ಲ. ಭಾರತೀಯ ಮಾರುಕಟ್ಟೆಯನ್ನು ಅನ್ವೇಷಿಸುವ ಬದಲು, ತಮ್ಮದೇ ದೇಶದಲ್ಲಿ ಕೆಲಸ ಮಾಡುವುದು ಉತ್ತಮ ಎಂದು ನಾನು ಪಾಕಿಸ್ತಾನಿಗಳಿಗೆ ಸಲಹೆ ನೀಡುತ್ತೇನೆ ಎಂದಿದ್ದಾರೆ.