Select Your Language

Notifications

webdunia
webdunia
webdunia
webdunia

`ನನ್ನ ಸೊಂಟದ ಮೇಲೆ ಆ ನಿರ್ದೇಶಕ ತೆಂಗಿನಕಾಯಿ ಹಾಕಿದ್ದೇಕೆ’

`ನನ್ನ ಸೊಂಟದ ಮೇಲೆ ಆ ನಿರ್ದೇಶಕ ತೆಂಗಿನಕಾಯಿ ಹಾಕಿದ್ದೇಕೆ’
ಮುಂಬೈ , ಸೋಮವಾರ, 10 ಜುಲೈ 2017 (20:26 IST)
ಬಹುಭಾಷಾ ನಟಿ ತಾಪ್ಸಿ ಪನ್ನು ತೆಲುಗಿನ ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರನ್ನ ಅಣಕಿಸಿ ಆನ್ ಲೈನ್`ನಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ದಕ್ಷಿಣದ ನಿರ್ದೇಶಕರು ನಟಿಯರ ಸೊಂಟದ ಬಗ್ಗೆ ಯಾಕಷ್ಟು ಆಕರ್ಷಿತರಾಗಿದ್ಧಾರೆ. ಹಲವು ಸಿನಿಮಾಗಳಲ್ಲಿ ನಟಿಯರ ಸೊಂಟ ಪ್ರದರ್ಶನದ ಬಗ್ಗೆ ಕಾಮಿಡಿ ಕಾರ್ಯಕ್ರಮವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ತಾಪ್ಸಿ ಪನ್ನು, ನನ್ನನ್ನ ತೆಲುಗು ಚಿತ್ರದಲ್ಲಿ ಲಾಂಚ್ ಮಾಡಿದ ನಿರ್ದೇಶಕರು ನಟಿಯರನ್ನ ಪರಿಚಯಿಸುವುದರಲ್ಲಿ ಗೋಲ್ಡನ್ ಹ್ಯಾಂಡ್ ಎಂದೇ ಪ್ರಸಿದ್ಧರು. ಶ್ರೀದೇವಿ ಮತ್ತು ಜಯಸುಧಾರಂತಹ ಖ್ಯಾತನಾಮರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದರು. ನನ್ನ ಸಿನಿಮಾ ಅವರು ನಿರ್ದೇಶಿಸಿದ 105ನೇ ಚಿತ್ರವಾಗಿತ್ತು. ನಟಿಯರ ಸೊಂಟದ ಮೇಲೆ ಹೂವು ಮತ್ತು ಹಣ್ಣನ್ನ ಸುರಿದು ಅವರ ಸೌಂದರ್ಯವನ್ನ ಪ್ರದರ್ಶಿಸುವುದರಲ್ಲಿ ಅವರು ಎತ್ತಿದ ಕೈ. ಅಂತಹ ಹಲವು ವಿಡಿಯೋಗಳನ್ನ ನಾನು ನೋಡಿದ್ದೇನೆ. ಆದರೆ, ನನ್ನ ಸಮಯ ಬಂದಾಗ ನನ್ನ ಸೊಂಟ ರೆಡಿ ಇರಲಿಲ್ಲವೇನೋ ಗೊತ್ತಿಲ್ಲ. ನನ್ನ ಸೊಂಟದ ಮೇಲೆ ತೆಂಗಿನಕಾಯಿ ಎಸೆದರು. ನನ್ನ ಸೊಂಟಕ್ಕೆ ತೆಂಗಿನ ಹೋಳು ಬೀಳುವುದರಲ್ಲಿ ಏನು ಸೆನ್ಸ್ಯುಯಾಲಿಟಿ ಇದೆಯೋ ನನಗೆ ಗೊತ್ತಿಲ್ಲ ಎಂದಿದ್ದರು.

ತಾಪ್ಸಿ ಹೇಳಿಕೆ ಬಗ್ಗೆ ಆನ್ ಲೈನ್`ನಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಜಯಸುಧಾ, ಶ್ರೀದೇವಿ ಮೇಲೆ ಹಣ್ಣನ್ನಸೆದವರು ನಿಮ್ಮ ಮೇಲೆ ಎಸೆಯಲಿಲ್ಲವೆಂದರೆ ತಪ್ಪು ಎಲ್ಲಿದೆ ಅರ್ಥ ಮಾಡಿಕೊಳ್ಳಬೇಕು. ನೀವ್ಯಾಕೆ ರಾಘವೇಂದ್ರರಾವ್ ಚಿತ್ರವನ್ನ ನಿರಾಕರಿಸಲಿಲ್ಲ ಎಂಬಿತ್ಯಾದಿ ಟೀಕಾಪ್ರಹಾರಗೈದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ: ಮಲೆಯಾಳಂ ನಟ ದಿಲೀಪ್ ಅರೆಸ್ಟ್