Select Your Language

Notifications

webdunia
webdunia
webdunia
webdunia

ಕೃತಿ ಕಿರು ಚಿತ್ರದ ಮೇಲೆ ಕಥೆ ಕದ್ದ ಆರೋಪ

ಕೃತಿ ಕಿರು ಚಿತ್ರದ ಮೇಲೆ ಕಥೆ ಕದ್ದ ಆರೋಪ
ಮುಂಬೈ , ಶನಿವಾರ, 25 ಜೂನ್ 2016 (16:39 IST)
ಶಿರೀಷ್ ಕುಂದರ್ ಅವರ ಕೃತಿ ಕಿರುಚಿತ್ರ ಇಚೆಗಷ್ಟೇ ಬಿಡುಗಡೆಯಾಗಿತ್ತು ಈ ಹಿನ್ನೆಲೆಯಲ್ಲಿ ನೇಪಾಳಿ ಚಿತ್ರದ ಕಥೆ ಕದಿಯಲಾಗಿದೆ ಎಂದು ನೇಪಾಳಿ ನಿರ್ಮಾಪಕರೊಬ್ಬರು ಆರೋಪಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದರುವ ನೇಪಾಳಿ ನಿರ್ಮಾಪಕ .ಶಿರೀಷ್ ಕುಂದರ್ ಅವರ ಕಿರುಚಿತ್ರವು ನಮ್ಮ ಚಿತ್ರದ ಕಥೆಯನ್ನು ಕಾಪಿ ಮಾಡಲಾಗಿದೆ ಎಂದು ಅವರು ಅನಿಲ್ ಆರೋಪಿಸಿದ್ದಾರೆ. 

 
ಇನ್ನೂ ನೇಪಾಳಿ ಚಿತ್ರ 2015ರಲ್ಲಿ ತೆರೆ ಕಂಡಿತ್ತು. ಚಿತ್ರದ ವಿಡಿಯೋವನ್ನು ಆತ್ಮೀಯ ಸ್ನೇಹಿತರಿಗೆ ಕಳುಹಿಸಲಾಗಿತ್ತು. ರಿಲೀಸ್‌ಗೂ ಮುನ್ನವೇ ಯೂಟೂಬ್ ಗಳಲ್ಲಿ ಅಪಲೋಡ್ ಮಾಡಲಾಗಿತ್ತಂತೆ. ಆದ್ರೆ ಈ ಬಗ್ಗೆ ನಿರ್ಮಾಪಕ ಶಿರೀಷ್ ಕುಂದರ್ ಅಲ್ಲಗಳೆದಿದ್ದಾರೆ. 
 
ಕೃತಿ' ಕಿರು ಚಿತ್ರದಲ್ಲಿ ಮನೋಜ್ ಬಾಜ್ಪೇಯಿ, ರಾಧಿಕಾ ಆಪ್ಟೆ, ಹಾಗೂ ನೇಹಾ ಶರ್ಮಾರನ್ನು ಕಾಣಬಹುದು. ವಿಭಿನ್ನ ಶೈಲಿಯಲ್ಲಿ ಕಿರುಚಿತ್ರ ರೂಪಿತಗೊಂಡಿದೆ. ಮೊನ್ನೆ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ.ಈ ಪೋಸ್ಟರ್‌ನಲ್ಲಿ ನೋಡುವಂತೆ ಮನೋಜ್ ಬಾಜ್ಪೇಯಿ ರಾಧಿಕಾ ಆಪ್ಟೆ ಬಾಯಿಯನ್ನು ಮುಚ್ಚಿರೋ ಭಂಗಿಯಲ್ಲಿ ನಿಂತಿದ್ರೆ, ಮತ್ತೂಂದು ಕೈಯಿಂದ ನೇಹಾ ಕಣ್ಣುಗಳ ಮೇಲೆ ಕೈ ಇಟ್ಟಿರುವ ಭಂಗಿಯಲ್ಲಿ ಫೋಸ್ಟರ್‌ನಲ್ಲಿ ಕಾಣಬಹುದು. 
 
ಇನ್ನೂ ಕುಂದರ್ ಪತ್ನಿ ಫರ್ಹಾ ಖಾನ್ ಕೂಡ ಚಿತ್ರದ ಪೋಸ್ಟರ್ ಶೇರ್ ಮಾಡಿದ್ದಾರೆ.  ಇನ್ನೂ ಮನೋಜ್ ಬಾಜ್ಪೇಯಿ ಅಲಿಗಢ್, ಜೈ ಹಿಂದ್ , ಬಾದಲಾಪುರ್ ಚಿತ್ರದಲ್ಲಿ ನಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಲು ವಿವಾದಾತ್ಮಕ ಹೇಳಿಕೆ.. ಏನು ಹೇಳ್ಬೇಕು ಎಂಬುದು ಜವಾಬ್ದಾರಿಯುತವಾದದ್ದು- ಫ್ರೀಡಾ ಪಿಂಟೋ