ಮುಂಬರುವ 'ಅಥರ್ವ' ಚಿತ್ರದಲ್ಲಿ ನಯನಾತಾರ ಮುಖ್ಯ ಪಾತ್ರದಲ್ಲಿ ನಟಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಅಜಯ್ ನಿರ್ದೇಶನ ಚಿತ್ರದಲ್ಲಿ ನಯನತಾರಾ ನಟಿಸುತ್ತಾರೆ ಎಂದು ಹೇಳಲಾಗ್ತಿತ್ತು. ಆದ್ರೆ ನಯನತಾರಾ ನಟಿಸುತ್ತಿಲ್ಲವಂತೆ.
ಈ ಬಗ್ಗೆ ನಿರ್ದೇಶಕ ಅಜಯ್ ಪ್ರತಿಕ್ರಿಯೆ ನೀಡಿದ್ದು ನಯನತಾರಾ ನಟಿಸದೇ ಇರುವುದರ ಬಗ್ಗೆ ಖಚಿತ ಪಡಿಸಿದ್ದಾರೆ. ನಯನಾತಾರಾ ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ, ಚಿತ್ರದ ರೋಲ್ ಗಾಗಿ ಬೇರೆ ನಟಿಯ ಹುಡಿಕಾಟದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಪ್ರಭುದೇವ ಜತೆಗೆ ಸುತ್ತಾಡಿ ಕಿಸ್ಸಿಂಗ್ ಮಾಡಿ ಸುದ್ದಿ ಮಾಡಿದ್ದ ನಯನತಾರ. ಅದಾದ ಮೇಲೆ ಇತ್ತೀಚೆಗೆ ನಯನತಾರಾ ಅಭಿನಯದ ತೆಲಗು ಚಿತ್ರವೊಂದರಲ್ಲಿ ಶಾಲಾ ಬಾಲಕನ ಜತೆ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡು ವಿವಾದ ಸೃಷ್ಟಿಸಿದ್ದರು. ಸ್ಕೂಲ್ ಬಾಲಕನ ಜತೆ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಸರಿಯಲ್ಲ ಎಂದು ಹಲವು ಜನರು ವಿರೋಧ ವ್ಯಕ್ತಪಡಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ