ಸೋನಾಕ್ಷಿ ಸಿನ್ಹಾ ಅಭಿನಯದ ಅಕಿರಾ ಚಿತ್ರ ಬಿಡುಗಡೆಯಾಗಿದೆ.. ಚಿತ್ರವು ಬಿಡುಗಡೆಯಾಗಿದ ಮೊದಲ ದಿನಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸೀಗುತ್ತಿದೆ. ಈ ಚಿತ್ರವನ್ನು ಎಆರ್ ಮಪರಘದಾಸ್ ನಿರ್ದೇಶನ ಮಾಡಿದ್ದಾರೆ. ಅಕಿರಾದಲ್ಲಿ ಸೋನಾಕ್ಷಿ ಟೈಟಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅನುರಾಗ್ ಕಶಪ್ಯ.. ಕೋಂಕಣಾ ಸೇನ್ ತಾರಾಗಣದಲ್ಲಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಸಖತ್ ಸೌಂಡು ಮಾಡಿತ್ತು.
ದಬ್ಬಾಂಗ್ ಚೆಲುವೆ ಸೋನಾಕ್ಷಿ ಸಿನ್ಹಾ ಅವರ ಯಾವುದೇ ಸಿನಿಮಾಗಳು ಕಳೆದ ಒಂದು ವರ್ಷದಲ್ಲಿ ರಿಲೀಸ್ ಆಗಲೇ ಇಲ್ಲ. ಹಾಗಾಗಿ ಸೋನಾಕ್ಷಿ ಸಿನ್ಹಾ ಅವರನ್ನು ಮತ್ತೆ ಯಾವಾಗ ತೆರೆ ಮೇಲೆ ನೋಡ್ತೇವೋ ಅಂತಾ ಅಭಿಮಾನಿಗಳು ಕಾಯುತ್ತಲೇ ಇದ್ದರು
ಸೋನಾಕ್ಷಿ ಸಿನ್ಹಾ ಅಭಿನಯದ ಅಕಿರಾ ಸಿನಿಮಾ ರಿಲೀಸ್ ಆಗಿದೆ.
ಹಲವು ಹಿಟ್ ಚಿತ್ರಗಳನ್ನು ನೀಡಿದ್ದ ಸೋನಾಕ್ಷಿ ಪಾಲಿಗೆ ಅತ್ಯಂತ ಮಹತ್ವದ ಸಿನಿಮಾ. ಇದುವೆರಗೂ ತಾನು ನಿರ್ವಹಿಸದೇ ಇರುವಂತಹ ಪಾತ್ರವನ್ನು ಸೋನಾಕ್ಷಿ ಸಿನ್ಹಾ ಈ ಸಿನಿಮಾದಲ್ಲಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ