Select Your Language

Notifications

webdunia
webdunia
webdunia
webdunia

ಸೋನಾಕ್ಷಿ ಸಿನ್ಹಾಗೆ ಚಾಲೆಂಜಿಂಗ್ ಪಾತ್ರಗಳು ಬೇಕಂತೆ

ಸೋನಾಕ್ಷಿ ಸಿನ್ಹಾಗೆ ಚಾಲೆಂಜಿಂಗ್ ಪಾತ್ರಗಳು ಬೇಕಂತೆ
Mumbai , ಶುಕ್ರವಾರ, 6 ಜನವರಿ 2017 (06:28 IST)
ಗ್ಲಾಮರ್ ಪಾತ್ರಗಳನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಕಷ್ಟ. ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಈಗ ಅದೇ ಮಾರ್ಗದಲ್ಲಿ ಹೆಜ್ಜೆ ಹಾಕಲು ಹೊರಟಿದ್ದಾರೆ. ಕಳೆದ ವರ್ಷ ಎರಡು ಆಕ್ಷನ್ ಪ್ರಧಾನ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. 
 
ಅದೇ ರೀತಿಯ ರೆಗ್ಯುಲರ್ ಚಿತ್ರಗಳಿಗಿಂತ ಇದುವರೆಗೂ ಅಭಿನಯಿಸದ, ಭಿನ್ನವಾದ ಪಾತ್ರಗಳಲ್ಲಿ ಅಭಿನಯಿಸಬೇಕೆಂದಿದ್ದೇನೆ ಎನ್ನುತ್ತಾರೆ ಸೋನಾಕ್ಷಿ ಸಿನ್ಹಾ. "ಯಾವುದೇ ಪಾತ್ರ ಮಾಡುವ ಮುನ್ನ ಅದು ಸವಾಲಾಗಿದೆಯಾ ಎಂದು ಪ್ರಶ್ನಿಸಿಕೊಳ್ಳುತ್ತೇನೆ. ಆ ಪಾತ್ರ ಚಾಲೆಂಜಿಂಗ್ ಆಗಿದೆ ಅನ್ನಿಸಿದರೆ ಅಭಿನಯಿಸುತ್ತೇನೆ. ಇದುವರೆಗೂ ಅಭಿನಯಿಸದೆ ಇರುವ ಪಾತ್ರದಲ್ಲಿ ಜೀವಿಸಬೇಕೆಂದಿದ್ದೇನೆ" ಎಂದಿದ್ದಾರೆ.
 
ಹಾಗಂತ ಯಾವ ಪಾತ್ರವೂ ಕಡಿಮೆ ಅಲ್ಲ. ಪ್ರತಿ ಪಾತ್ರಕ್ಕೂ ಅದಕ್ಕೆ ತಕ್ಕಂತೆ ಕಷ್ಟಪಡಬೇಕಾಗುತ್ತದೆ. ಅದೆ ಆಕ್ಷನ್ ಚಿತ್ರಗಳಾದರೆ ದೈಹಿಕವಾಗಿ ಕಷ್ಟಪಡಬೇಕು. ಈಗ ಅಭಿನಯಿಸುತ್ತಿರುವ ಚಿತ್ರಗಳಲ್ಲಿ ನನ್ನ ಪಾತ್ರ ಚಾಲೆಂಜಿಂಗ್ ಆಗಿದೆ. ಇದುವರೆಗೂ ನಾನು ಅಭಿನಯಿಸಿದ ಪಾತ್ರಗಳಿಗೆ ಸಿಕ್ಕಿದ ಪ್ರತಿಕ್ರಿಯೆಗೆ ತುಂಬಾ ಖುಷಿ ಇದೆ ಎಂದಿದ್ದಾರೆ ಸೋನಾಕ್ಷಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಲೈಂಗಿಕ ದೌರ್ಜನ್ಯ: ವೈರಲ್ ಆದ ಅಕ್ಷಯ್ ಕುಮಾರ್ ಪ್ರತಿಕ್ರಿಯೆ