Select Your Language

Notifications

webdunia
webdunia
webdunia
webdunia

ಬೆಂಗಳೂರು ಲೈಂಗಿಕ ದೌರ್ಜನ್ಯ: ವೈರಲ್ ಆದ ಅಕ್ಷಯ್ ಕುಮಾರ್ ಪ್ರತಿಕ್ರಿಯೆ

ಬೆಂಗಳೂರು ಲೈಂಗಿಕ ದೌರ್ಜನ್ಯ: ವೈರಲ್ ಆದ ಅಕ್ಷಯ್ ಕುಮಾರ್ ಪ್ರತಿಕ್ರಿಯೆ
ಮುಂಬೈ , ಗುರುವಾರ, 5 ಜನವರಿ 2017 (19:33 IST)
ಹೊಸ ವರ್ಷಚಾರಣೆಯಂದು ಸಿಲಿಕಾನ್ ಸಿಟಿಯ ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಯುವತಿಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ, ಕಮ್ಮನಹಳ್ಳಿಯಲ್ಲಿ ನಡೆದ ಹೇಯ ಕೃತ್ಯದ ಬಗ್ಗೆ ಬಾಲಿವುಡ್ ನಟ ಅಕ್ಷಯ ಕುಮಾರ್ ಖಂಡನೆ ವ್ಯಕ್ತ ಪಡಿಸಿದ್ದಾರೆ. 
ಟ್ವಿಟರ್ ಮೂಲಕ ಬೆಂಗಳೂರಿನಲ್ಲಿ ನಡೆದ ಹೇಯ ಕೃತ್ಯವನ್ನು ಖಂಡಿಸಿರುವ ಅವರು, ಬೆಂಗಳೂರಿನಲ್ಲಿ ನಡೆದಿರುವ ಪ್ರಕರಣದಿಂದಾಗಿ ನಾವು ಬಹಳ ಹಿಂದಕ್ಕೆ ಮರಳುತ್ತಿದ್ದೇವೆ ಎಂದನ್ನಿಸುತ್ತಿದೆ. ಮನುಷ್ಯರೆನಿಸಿಕೊಂಡು ಮೃಗಗಳಾಗುತ್ತಿದ್ದೇವೆ. ಪ್ರಾಣಿಗಳೇ ನಮಗಿಂತ ಎಷ್ಟೋ ವಾಸಿ, ಇದು ತೀರಾ ನಾಚಿಕೆಗೇಡು ಎಂದಿದ್ದಾರೆ. 
 
ಕೆಲವರು ಮಹಿಳೆಯರು ತೊಡುವ ಬಟ್ಟೆಗಳ ಬಗ್ಗೆ ಕೆಟ್ಟ ಭಾವನೆಯನ್ನು ಹೊಂದಿರುವುದು ನನಗೆ ಅಸಹ್ಯ ತಂದಿದೆ. ಬೆಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ತಿಳಿದಾಗ ನನ್ನ 4 ವರ್ಷದ ನನ್ನ ಮಗಳು ಜತೆಯಲ್ಲಿದ್ದಳು. ನಾನು ಮನುಷ್ಯನಾಗಿ ತಲೆತಗ್ಗಿಸುವಂತಾಯಿತು. ನನ್ನ ನೆತ್ತರು ಕುದಿಯುತ್ತಿತ್ತು. ನಾನು ಮಗಳ ತಂದೆಯಾಗಿ ಅಷ್ಟೇ ಹೇಳುತ್ತಿಲ್ಲ. ಸಮಾಜದಲ್ಲಿ ಮಹಿಳೆಯರಿಗೆ ಗೌರವವೇ ಇಲ್ಲದಂತಾಗಿದೆ ಎಂದು ಅವರು ನೊಂದು ನುಡಿದಿದ್ದಾರೆ. 
 
ಈ ವಿಡಿಯೋ ವೈರಲ್ ಆಗಿ ಹರಿದಾಡುತ್ತಿದ್ದು 15,000ಕ್ಕೂ ಹೆಚ್ಚು ಲೈಕ್ ಪಡೆದುಕೊಂಡಿದೆ ಮತ್ತು 7,000ಹೆಚ್ಚು ಸಲ ರಿಟ್ವೀಟ್ ಆಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಹಾರ್ ಸಿಎಂ ನಿತೀಶ್ ಕುಮಾರ್‌ರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ