ಸ್ಯಾಂಡಲ್‌ವುಡ್ ನಟ ಗಣೇಶ್ ಹಾಗೂ ರವಿಚಂದ್ರನ್ ಅಭಿನಯದ ಮುಂಗಾರು ಮಳೆ 2 ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದೆ. ಚಿತ್ರಕ್ಕೆ ಯಾವುದೇ ಕತ್ತರಿ ಪ್ರಯೋಗ ಮಾಡದೇ ಸೆನ್ಸಾರ್ ಮಂಡಳಿ 'ಯು' ಸರ್ಟಿಫಿಕೇಟ್ ನೀಡಿದೆ. ಚಿತ್ರ ಸೆಪ್ಟೆಂಬರ್‌ನಲ್ಲಿ ತೆರೆ ಕಾಣಲಿದೆ.
ಈ ಚಿತ್ರವನ್ನು ನಿರ್ದೇಶಕ ಶಶಾಂಕ್ ನಿರ್ದೇಶಿಸಿದ್ದು, ಈಗಾಗ್ಲೇ ಬಿಡುಗಡೆಗೊಂಡಿರು ಚಿತ್ರದ ಹಾಡುಗಳು ಚಿತ್ರರಸಿಕರನ್ನು ಮೋಡಿ ಮಾಡುತ್ತಿವೆ.
ಮತ್ತೆ ಬಹು ದಿನದ ಬಳಿಕ ಮುಂಗಾರು ಮಳೆ -2 ಚಿತ್ರ ತೆರೆ ಮೇಲೆ ಎಂಟ್ರಿ ನೀಡುತ್ತಿದೆ. ಈ ಚಿತ್ರದಲ್ಲಿ ಮೊದಲ ಮುಂಗಾರು ಮಳೆ ಚಿತ್ರಕ್ಕಿಂತಲೂ ಇದೀಗ ಬರುತ್ತಿರುವ ಸಿನಿಮಾದಲ್ಲಿ ಎಲ್ಲವೂ ವಿಭಿನ್ನವಾಗಿ ಮೂಡಿ ಬಂದಿದೆ.
ಆದ ಕಾರಣ ಮುಂಗಾರು ಮಳೆ - 2 ಚಿತ್ರವು ಮತ್ತೆ ಇತಿಹಾಸ ನಿರ್ಮಿಸುತ್ತಾ? ಮತ್ತೊಮ್ಮೆ ಚಿತ್ರವನ್ನು ಪ್ರೇಕ್ಷಕರು ಲೈಕ್ ಮಾಡ್ತಾರಾ? ಎಂಬುದು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಈ ಹಿಂದೆ ತೆರೆ ಕಂಡಿದ್ದ ಮುಂಗಾರು ಮಳೆ ಚಿತ್ರ ಸೂಪರ್ ಡೂಪರ್ ಹಿಟ್ ಕಂಡಿತ್ತು. ದೊಡ್ಡ ಮಟ್ಟದಲ್ಲಿ ಓಡುವ ಚಿತ್ರದಲ್ಲಿ ಇದು ಮೊದಲೇನೆಯ ಚಿತ್ರವಾಗಿ ಹೊರಹೊಮ್ಮಿತ್ತು. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿಯೂ ಮುಂಗಾರು ಮಳೆ ಚಿತ್ರ ಹವಾ ಕ್ರಿಕೇಟ್ ಮಾಡಿತ್ತು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ